Advertisement
-ಇವು ಕನ್ನಡ ಚಳವಳಿ ವಾಟಾಳ್ ಪಕ್ಷ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳು.
ಸಾಮಾನ್ಯವಾಗಿ ಪ್ರತಿಭಟನೆಗಳಿಗೆ ಪ್ರಾಣಿಗಳನ್ನು ಬಳಸುವ ವಾಟಾಳ್ ನಾಗರಾಜ್, ತಮ್ಮ ಪ್ರಣಾಳಿಕೆಯಲ್ಲಿ ಕತ್ತೆ, ಎಮ್ಮೆಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಕತ್ತೆಗಳು ಧರ್ಮದೇವತೆ ಇದ್ದಂತೆ. ಅವುಗಳ ಅಭಿವೃದ್ಧಿಗಾಗಿ ವಿಶೇಷ ಮಂಡಳಿ ಹಾಗೂ ಎಮ್ಮೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪ್ರೇಮ ವಿವಾಹಕ್ಕೆ 50 ಸಾವಿರ ರೂ.ನೆರವು: ಐತಿಹಾಸಿಕ ಬೆಂಗಳೂರು ನಗರದ ವೈಭವವನ್ನು ವೀಕ್ಷಿಸಲು ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರೇಮಿಗಳ ದಿನದಂದು ಸರ್ಕಾರಿ ರಜೆ ಘೋಷಣೆ ಜತೆಗೆ ಪ್ರೇಮ ವಿವಾಹಕ್ಕೆ ಸರ್ಕಾರದಿಂದ 50 ಸಾವಿರ ರೂ. ನೆರವು ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗು ವುದು ಎಂದರು. ಜತೆಗೆ, ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಕಳಸಾ-ಬಂಡೂರಿ ಯೋಜನೆ ಜಾರಿ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರುದ್ಧ ಹೋರಾಟವು ಪಕ್ಷದ ಆದ್ಯತೆ ಆಗಲಿದೆ ಎಂದರು.
Related Articles
ಪ್ರಧಾನಿ ಮೋದಿ ಅವರು ಚಾಮರಾಜನಗರಕ್ಕೆ ತೆರಳದೆ, ಸಂತೆಮರಹಳ್ಳಿಯಿಂದಲೇ ಹಿಂತಿರುಗಿರುವ ಮೂಲಕ ಮೌಡ್ಯವನ್ನು ಬೆಂಬಲಿಸಿದಂತಾಗಿದೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು. ಚಾಮರಾಜನಗರಕ್ಕೆ ಹೋದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇದೆ. ಇದಕ್ಕೆ ಪೂರಕವಾಗಿ ಮಂಗಳವಾರ ಪ್ರಧಾನಿ ಮೋದಿ ಅವರು ಚಾಮರಾಜನಗರಕ್ಕೆ ಹೋಗದೆ, ಹಾಗೇ ಹಿಂದಿರುಗಿದ್ದಾರೆ. ಇದರಿಂದ ಮೂಢನಂಬಿಕೆ ಹೆಚ್ಚಿಸಿದಂತಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ದೂರಿದರು.
Advertisement