ಶಿಡ್ಲಘಟ್ಟ : ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಸುತ್ತಮುತ್ತ ಆಲಿಕಲ್ಲು ಮಳೆಯಿಂದ ದ್ರಾಕ್ಷಿ-ಟೊಮೆಟೋ ಹಾಗೂ ತರಕಾರಿ ಬೆಳೆಗಳು ನಾಶವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್ ಹಾಗೂ ಬೆಂಗಳೂರು ವಿಭಾಗೀಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿಶ್ವನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಗುರುವಾರದಂದು ಸಂಜೆ ಬಿದ್ದ ಆಲಿಕಲ್ಲು ಮಳೆಯಿಂದ ,ಬಶೆಟ್ಟಹಳ್ಳಿ, ಗೌಡನಹಳ್ಳಿ, ಧನಮಿಟ್ಟನಹಳ್ಳಿ, ವಲಸೇನಹಳ್ಳಿ, ಮುದ್ದನದಿನ್ನೆ, ದ್ಯಾವರಹಳ್ಳಿ ಮತ್ತಿತರರು ಪ್ರದೇಶದಲ್ಲಿ ಹಾನಿಯಾಗಿರುವ ಬೆಳೆಗಳನ್ನು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ತಹಶೀಲ್ದಾರ್ ವೀಕ್ಷಿಸಿದರು ಇದೇ ಸಂದರ್ಭದಲ್ಲಿ ರೈತರು ನಷ್ಟ ಹೊಂದಿರುವ ಬೆಳೆಗಳನ್ನು ತೋರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಜಂಟಿ ಸಮೀಕ್ಷೆ ನಡೆಸಿದ ಅಧಿಕಾರಿಗಳು ಟೊಮೆಟೋ 90 ಎಕರೆ,ದ್ರಾಕ್ಷಿ 25 ಎಕರೆ,ಪಾಲಿಹೌಸ್ 7,ಕ್ಯಾಬೇಜ್2 ಎಕರೆ,ಹಾಗಲಕಾಯಿ 2 ಎಕರೆ,ಬೀನ್ಸ್ 3 ಎಕರೆ,ಚೆಂಡು ಹೂವು 2 ಎಕರೆ,ಬೀಟರೂಟ್ 3 ಎಕರೆ ಸಹಿತ 127 ಎಕರೆ ಬೆಳೆ ನಷ್ಟ ಸಂಭವಿಸಿರುವ ಕುರಿತು ಅಂದಾಜು ವರದಿಯನ್ನು ಸಿದ್ದಪಡಿಸಿದ್ದಾರೆ ಇದರಿಂದ ಸುಮಾರು 5-6 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ :ಮಾಜಿ ಸೈನಿಕನಿಗೆ ಜಮೀನು ಮಂಜೂರು ಮಾಡಲು ಲಂಚ : ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್,ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು ಆಲಿಕಲ್ಲು ಮಳೆ,ನೆಲಕಚ್ಚಿದ ಟೊಮೆಟೋ,ದ್ರಾಕ್ಷಿ ಬೆಳೆ ಎಂಬ ಶೀರ್ಷಿಕೆಯಡಿ ಉದಯವಾಣಿಯಲ್ಲಿ ವರದಿ ಪ್ರಕಟಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಬೃಹತ್‍ಗಾತ್ರದ ಆಲಿಕಲ್ಲು ಸಹಿತ ಮಳೆ ಬಿದ್ದು ದ್ರಾಕ್ಷಿ-ಟೊಮೆಟೋ ಹಾಗೂ ತರಕಾರಿ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ರೈತ ಮುಖಂಡರು ಒತ್ತಾಯಿಸಿದರು.