Advertisement
ನಮ್ಮ ಬಾಲ್ಯದೆಡೆಗೆ ಮನಸ್ಸನ್ನು ಕೊಂಡೊಯ್ದಾಗ ಹವ್ಯಾಸಗಳ ಸರಮಾಲೆಯೇ ಕಣ್ಣಂಚಿಗೆ ಬರುತ್ತದೆ. ಆ ಕಾಲದಲ್ಲಿ- ಓದುವುದು, ಬರೆಯುವುದು, ಹಾಡುವುದು, ರೇಡಿಯೋ ಕೇಳುವುದು, ನಾಟಕ-ಯಕ್ಷಗಾನ, ಈಜುವುದು, ಸೈಕಲ್ ಸವಾರಿ, ಮರಹತ್ತುವುದು, ಬೆಟ್ಟ ಹತ್ತುವುದು, ಚಿತ್ರ ಮಾಡುವುದು, ಓಟ, ಮೀನು ಹಿಡಿಯುವುದು, ಕಾಗದದ ಡಿಸೈನ್‌ಗಳು, ಸಂಗೀತ ಉಪಕರಣಗಳ ಅಭ್ಯಾಸ… ಅಬ್ಬಬ್ಟಾ ! ಮುಗಿಯದಷ್ಟಿವೆ. ಆದರೆ, ಈಗ ಮೊಬೈಲ್, ಟೀವಿ, ಲ್ಯಾಪ್‌ಟಾಪ್‌ಗ್ಳಿಂದಾಗಿ ಹವ್ಯಾಸಗಳೆಲ್ಲ ನೆನಪಿನಂಚಿಗೆ ಜಾರುತ್ತಿದೆ. ಪ್ರತಿಯೊಂದು ಹವ್ಯಾಸದಲ್ಲೂ ಒಂದು ಚತುರತೆ ಎನ್ನುವುದಿದೆ. ಉದಾಹರಣೆಗೆ- ಚೆಸ್‌ಆಡುವವರಿಗೆ ತಾಳ್ಮೆ ಹಾಗೂ ಮನಸ್ಸನ್ನು ಗೆಲುವಿನೆಡೆಗೆ ಕೊಂಡೊಯ್ಯುವ ಚಾತುರ್ಯ ಸಿಗುತ್ತದೆ. ಇಂಥ ಹತ್ತು ಹಲವು ದೃಷ್ಟಾಂತಗಳಿವೆ. ಹಿರಿಯರು ಚಿಕ್ಕಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದು ಸಸಿಗೆ ಹಾಕುವ ನೀರು, ಗೊಬ್ಬರಗಳಂತೆಯೆ. ಒಳ್ಳೆಯ ಫಲ ಕೊಡುತ್ತವೆ.
ಮುಕೇಶ್ ನೆಕ್ಕರಡ್ಕ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ಭಾಗ
ಮಂಗಳೂರು ಶ್ವದ್ಯಾನಿಲಯ, ಕೋಣಾಜೆ