ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿಗ್ರಾಪಂ ಸುತ್ತಮುತ್ತ ಗುರುವಾರ ಸಂಜೆ ಬಿದ್ದ ಆಲಿಕಲ್ಲುಮಳೆಯಿಂದ ದ್ರಾಕ್ಷಿ-ಟೊಮೆಟೋ-ತರಕಾರಿ ಬೆಳೆಗೆಹಾನಿಯಾಗಿದ್ದು ಪಾಲಿಹೌಸ್ ನೆಲಕಚ್ಚಿ ಅಪಾರ ಪ್ರಮಾಣದಲ್ಲಿನಷ್ಟವುಂಟಾಗಿದೆ.
ತಾಲೂಕಿನ ಬಶೆಟ್ಟಹಳ್ಳಿ ಹಾಗೂ ದೊಡ್ಡತೇಕಹಳ್ಳಿಗ್ರಾಪಂ ಸುತ್ತಮುತ್ತಲಿನ ರೈತರ ಬೆಳೆಗಳಿಗೆ ಹಾನಿಯಾಗಿದ್ದು ಬೃಹತ್ ಗಾತ್ರದ ಆಲಿಕಲ್ಲು ಬಿದ್ದಿದ್ದ ರಿಂದಪಾಲಿಹೌಸ್ ನಾಶವಾಗಿದೆ. ಮಳೆ ಆರ್ಭಟಕ್ಕೆಮರ-ಗಿಡಗಳು ನೆಲಕ್ಕುರುಳಿದ್ದು ಅದೃಷ್ಟವಶಾತ್‌ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಶೆಟ್ಟಹಳ್ಳಿ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರೈತರಿಗೆ ಆಗಿರುವ ನಷ್ಟವನ್ನು ಪ್ರಾಥಮಿಕ ವರದಿಯಲ್ಲಿದಾಖಲಿಸಿದ್ದಾರೆ. ಶುಕ್ರವಾರ ಕೃಷಿ ಮತ್ತು ಕಂದಾಯ ಇಲಾಖೆಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಎಷ್ಟು ಪ್ರಮಾಣದಲ್ಲಿನಷ್ಟವುಂಟಾಗಿದೆ ಎಂಬುದನ್ನು ಸಮೀಕ್ಷೆ ಮಾಡಲಿ ದ್ದಾರೆ.
ಜಿಲ್ಲಾಡಳಿತ ಗಮ ನಹರಿಸಲಿ: ಶಿಡ್ಲ ಘಟ್ಟ ತಾಲೂ ಕಿನ ಬಶೆಟ್ಟಿಹಳ್ಳಿ ಮತ್ತುದೊಡ್ಡ ತೇಕಹಳ್ಳಿ ಗ್ರಾಪಂ ಸುತ್ತಮುತ್ತ ಆಲಿ ಕಲ್ಲು ಮಳೆ ಯಿಂದ ರೈತರುಲಕ್ಷಾಂತರ ರೂ. ನಷ್ಟ ಅನುಭವಿಸಿದ್ದು ಜಿಲ್ಲಾಡಳಿತ ಕೂಡಲೇ ರೈತರಿಗೆನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳ ಬೇಕೆಂದು ರಾಜ್ಯ ರೈತ ಸಂಘಹಾಗೂ ಹಸಿರುಸೇನೆ(ಕೋಡಹಳ್ಳಿ ಚಂದ್ರಶೇಖರ್ ಬಣ) ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಆಗ್ರಹಿಸಿದ್ದಾರೆ.
ಲಕ್ಷಾಂತರ ರೂ.ನಷ್ಟಬಶೆಟ್ಟಹಳ್ಳಿ ಗ್ರಾಪಂ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಆಲಿಕಲ್ಲುಮಳೆಯಾಗಿದ್ದರಿಂದ ರೈತರು ಲಕ್ಷಾಂತರ ರೂ.ಗಳ ನಷ್ಟ ಅನುಭವಿಸುವಂತಾಗಿದೆ. ಗೌಡನಹಳ್ಳಿಯನವೀನ್ ಪಾಲಿಹೌಸ್, ಶೀಟ್ ಮನೆ, ನಿವೃತ್ತ ಉಪ ತಹಶೀಲ್ದಾರ್ ನಾರಾಯಣಸ್ವಾಮಿ ಅವರಿಗೆಸೇರಿದ ದ್ರಾಕ್ಷಿ ಚಪ್ಪರಕ್ಕೆ ಹಾನಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಕೂಡಲೇ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ.