Advertisement
ಪಟ್ಟಣದ ಗುರುಭವನದಲ್ಲಿ ನಡೆದ ದೈಹಿಕ ಶಿಕ್ಷಕರ ಜಿಲ್ಲಾಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಕುರಿತಂತೆ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಆಯಾ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸುವಂತೆ ಸೂಚನೆ ನೀಡಿದರು. ದೈಹಿಕ ಶಿಕ್ಷಕರ ಕೊರತೆ ಕ್ಷೇತ್ರದಲ್ಲಿ ಸಾಕಷ್ಟಿದ್ದು ಶಿಕ್ಷಣ ಸಚಿವರ ಗಮನಸೆಳೆಯಲಾಗುವುದು. ಕ್ಷೇತ್ರದ ಶಾಲೆಗಳಲ್ಲಿ ಮೈದಾನದ ಕೊರತೆ ಹೆಚ್ಚಿದ್ದು ಈಗಾಗಲೇ ಅಲ್ಲಲ್ಲಿ ನಿವೇಶನ ಗುರುತಿಸಿ ಮಕ್ಕಳ ಆಟೋಟಗಳಿಗೆ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಕರು ಪರಿಪೂರ್ಣ ಬೋಧನೆಯಲ್ಲಿ ತೊಡಗಿಕೊಂಡು ಮಕ್ಕಳ ಏಳಿಗೆಗೆ ಶ್ರಮಿಸಬೇಕು. ಗುಣಮಟ್ಟದ ಶಿಕ್ಷಣ ಮಗುವಿನ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎಂದು ತಿಳಿಸಿದರು.
ನೇಮಕಾತಿ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಕೂಡಲೇ ನಿರ್ಧರಿಸಬೇಕು. ಪ್ರೊ| ಎಲ್.ಆರ್. ವೈದ್ಯನಾಥನ್ ವರದಿ ಅನ್ವಯ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರನ್ನಾಗಿ ಪರಿಗಣಿಸಿ ತಕ್ಷಣವೇ ಆದೇಶ ಹೊರಡಿಸಬೇಕು. ಈ ಕುರಿತಂತೆ 13ನೇ ಅಂಶದ ತಿದ್ದುಪಡಿಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಸಂಘದ ಜಿಲ್ಲಾಧ್ಯಕ್ಷ ಯರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಇಒ ಶೇಖರಪ್ಪ ಹೊರಪೇಟೆ ಮಾತನಾಡಿದರು. ಇದೇವೇಳೆ ನಿವೃತ್ತ ಮತ್ತು ತಾಲೂಕಿನ ಇಬ್ಬರು ಉತ್ತಮ ದೈಹಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಘದ ರಾಜ್ಯ ಸಂಪನ್ಮೂಲ ವ್ಯಕ್ತಿ ಕಲ್ಲೇಶ್, ಯುವ ಮುಖಂಡ ರಾಜೀವ್ ಮೈದೂರ್, ರಾಜ್ಯ ಸಂಘಟನ ಕಾರ್ಯದರ್ಶಿ ಬಿ. ರಮೇಶ, ಜಿಲ್ಲಾ ಅಧಿಕ್ಷಕ ರುದ್ರಮುನಿ, ದೈಹಿಕ ವಿಷಯ ಪರಿವೀಕ್ಷಕ ಕೆ.ವಿ.ಎಂ. ನಾಗಭೂಷಣ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಉಜ್ಜನಗೌಡ, ಮೈದೂರು ಶಶಿಧರ, ಕೊಟ್ರಾಗೌಡ, ಕೆ.ವಿ.ಲೋಕೇಶ್, ಹೇಮಗಿರಿ, ರಾಜಶೇಖರ, ರಾಜು ಸೋಗಿ, ಎಂ.ನಾಗಪ್ಪ, ಟಿ.ಜಿ.ಬಸವರಾಜ, ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ, ಹೆಗ್ಡಾಳ್ ರಾಮಣ್ಣ, ಮುಟುಗನಹಳ್ಳಿ ಕೊಟ್ರೇಶ, ಕನ್ನಿಹಳ್ಳಿ ಚಂದ್ರಶೇಖರ, ಮೈಲಾರಪ್ಪ ಇತರರಿದ್ದರು. ಸಂಘದ ತಾಲೂಕು ಅಧ್ಯಕ್ಷ ಸಿ.ಕೊಟ್ರೇಶ, ಸದಸ್ಯ ಕುಂಚೂರು ಮಲ್ಲಿಕಾರ್ಜುನ ನಿರೂಪಿಸಿದರು.