Advertisement

2020ರೊಳಗೆ ಮಾಲವಿ ಜಲಾಶಯ ಪೂರ್ಣ

11:41 AM Dec 30, 2019 | Naveen |

ಹಗರಿಬೊಮ್ಮನಹಳ್ಳಿ: ಆಗಸ್ಟ್‌ 2020ರೊಳಗೆ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸುವ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರುಣಿಸಲಾಗುವುದು ಎಂದು ಶಾಸಕ ಭೀಮಾನಾಯ್ಕ ತಿಳಿಸಿದರು.

Advertisement

ತಾಲೂಕಿನ ಉಲುವತ್ತಿ ಗ್ರಾಮದ ಸಿಸಿರಸ್ತೆ, ಶಾಲಾ ಕೊಠಡಿ ಸೇರಿದಂತೆ 1.26 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಸರಕಾರದ ಅವಧಿಯಲ್ಲಿ ಮಾಲವಿ ಜಲಾಶಯಕ್ಕೆ 150 ಕೋಟಿ ರೂ. ಅನುದಾನ ನೀಡುವ ಮೂಲಕ ಮಾಲವಿ ಜಲಾಶಯ ವ್ಯಾಪ್ತಿಯ ರೈತರ ಬಹುದಿನದ ಕನಸನ್ನು ನನಸಾಗಿಸಿದ್ದಾರೆ. ಉಲುವತ್ತಿಯಲ್ಲಿ ಗ್ರಾಪಂ ಕಚೇರಿಯ ಅವಶ್ಯಕತೆಯಿರುವುದನ್ನು ಮನಗಂಡಿದ್ದು ಇನ್ನೊಂದು ವರ್ಷದೊಳಗೆ ಉಲುವತ್ತಿ ಗ್ರಾಮಕ್ಕೆ ಗ್ರಾಮ ಪಂಚಾಯ್ತಿ ಕಚೇರಿ ತಂದು ಮೂಲಭೂತ ಸೌಕರ್ಯಗಳು ಕೂಡಲೇ ಸಿಗಲು ಅನುಕೂಲ ಮಾಡಿಕೊಡಲಾಗುವುದು.

ಗ್ರಾಮದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದ್ದು, ಮುಂದಿನ ಸಾಲಿನಲ್ಲಿ 1 ಕೋಟಿಗೂ ಅಧಿ ಕ ಅನುದಾನ ನೀಡಿ ಗ್ರಾಮದ ಸಿಸಿ ರಸ್ತೆ, ಚರಂಡಿ, ದೇವಸ್ಥಾನಗಳ ಅಭಿವೃದ್ಧಿಯನ್ನು ಮಾಡಲಾಗುವುದು. 8 ಶಾಲಾ ಕೊಠಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ಮಾರ್ದನಿಸಿದ ಹೌದು ಹುಲಿಯಾ: ಶಾಸಕ ಭೀಮಾನಾಯ್ಕ ಭಾಷಣದುದ್ದಕ್ಕೂ ಉಲುವತ್ತಿ ಗ್ರಾಮದ ಯುವಕರು ಹೌದು ಹುಲಿಯಾ ಎಂದು ಶಹಬ್ಟಾಸ್‌ ಗಿರಿ ನೀಡುತ್ತಿದ್ದು ಕಂಡುಬಂತು. ಗ್ರಾಮಕ್ಕೆ ಕೋಟಿ ರೂ. ಅನುದಾನ ನೀಡುತ್ತೇನೆ ಎಂದಾಕ್ಷಣ ಹೌದು ಹುಲಿಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರು ಗ್ರಾಮವನ್ನು ಸತತ ಎರಡು ತಾಸುಗಳ ಕಾಲ ಸುತ್ತಿ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಪೂರಕವಾಗಿ ಸ್ಪಂದಿಸಿದ್ದು ಕಂಡುಬಂತು. ಮಾಜಿ ಸಿಎಂ ಸಿದ್ದರಾಮಯ್ಯನವರ ಹೆಸರು ಶಾಸಕರು ಹೇಳುತ್ತಿದ್ದಂತೆ ಗ್ರಾಮಸ್ಥರಲ್ಲಿ ಸಂತೋಷ ಹರಿದುಬಂತು.

ಭೀಮಾನಾಯ್ಕ ಈ ಗ್ರಾಮ ಚುನಾವಣೆಯಲ್ಲಿ 700 ಮತಗಳನ್ನು
ಲೀಡ್‌ ಕೊಟ್ಟಿದೆ ಎಂದು ಹೇಳಿದಾಕ್ಷಣ ಮುಂದಿನ ಚುನಾವಣೆಯಲ್ಲಿ ಇದಕ್ಕಿಂತ ಹೆಚ್ಚು ಮತಗಳ ಲೀಡ್‌ ಕೊಡುತ್ತೇವೆ ಎಂದು ಹುಮ್ಮಸ್ಸಿನಿಂದ ಹೇಳಿದರು. ಶಾಸಕರ ಆಗಮನದಿಂದ ಉಲುವತ್ತಿ ಗ್ರಾಮಸ್ಥರು ಬಹುಸಂಖ್ಯೆಯಲ್ಲಿ ಸೇರಿದ್ದರು. ಇದಕ್ಕೂ ಮುನ್ನ ಹರೇಗೊಂಡನಹಳ್ಳಿ, ಮಾಲವಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

Advertisement

ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಸೋಮಲಿಂಗಪ್ಪ ಮಾತನಾಡಿದರು. ಪುರಸಭೆ ಸದಸ್ಯ ಉಲುವತ್ತಿ ಬಾಬುವಲಿ, ತಾಪಂ ಸದಸ್ಯೆ ಶ್ಯಾಮಲಾ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್‌, ಮುಟುಗನಹಳ್ಳಿ ಕೊಟ್ರೇಶ್‌, ಕುರಿ ಶಿವಮೂರ್ತಿ, ಡಿಶ್‌ ಮಂಜುನಾಥ, ಮಾಬುಬೇಗ್‌, ಮೈಬುಸಾಬ್‌, ಗೋವಿಂದಪ್ಪ, ವೆಂಕಟೇಶ್‌, ದುರುಗಪ್ಪ, ಹ್ಯಾಳ್ಯಾದ ಚನ್ನಬಸಪ್ಪ, ಚಂದ್ರಶೇಖರ ಇತರರಿದ್ದರು. ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next