ಹಗರಿಬೊಮ್ಮನಹಳ್ಳಿ: ಪ್ರತಿಯೊಬ್ಬರು ಕಾನೂನಿನ ಅರಿವು ಹೊಂದುವುದು ಅತ್ಯಗತ್ಯವಾಗಿದ್ದು ಕಾನೂನಿನ ಪ್ರಜ್ಞೆಯಿಂದ ಸಹಮತದಿಂದ ಬದುಕಬಹುದು ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧಿಧೀಶ ಬಿ.ಸಿ. ಚಂದ್ರಶೇಖರ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ಕಾರ್ಮಿಕರ ಇಲಾಖೆಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಏರ್ಪಡಿಸಿದ್ದ ಕಾನೂನು ಸಾಕ್ಷರಥ ರಥ ಯಾತ್ರೆಗೆ ಚಾಲನೆ ನೀಡಿ ಅವರು ಶುಕ್ರವಾರ ಮಾತನಾಡಿದರು.
ಮನುಷ್ಯ ಬದುಕಿಗೆ ಕಾನೂನು ಒಂದು ಜೀವಾಳ, ನ್ಯಾಯ ಸಮ್ಮತ ರಕ್ಷಣೆಯನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶದ ಜನರು ನಿತ್ಯ ಜೀವನದ ಸಮಸ್ಯೆಗಳ ಪರಿಹಾರಕ್ಕೆ ಸಾಮಾನ್ಯ ಕಾನೂನು ಅರಿವು ಹೊಂದುವ ಅಗತ್ಯವಿದೆ. ಕಾನೂನು ರಥದ ಮೂಲಕ ತಾಲೂಕಿನ ವಿವಿಧೆಡೆ ಕಾನೂನು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಜೆಎಂಎಫ್‌ಸಿ ಕಿರಿಯ ಶ್ರೇಣಿ ನ್ಯಾಯಾಧೀಶ ವಿಜಯಕುಮಾರ ಜಟ್ಲಾ ಮಾತನಾಡಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಸಾಕ್ಷರಥಾ ರಥಯಾತ್ರೆ ಹಮ್ಮಿಕೊಂಡಿದ್ದು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ತಹಶೀಲ್ದಾರ್ ಅಶಪ್ಪ ಪೂಜಾರ್, ವಕೀಲರ ಸಂಘದ ಗೌರವ ಅಧ್ಯಕ್ಷ ಬಿ.ವಿ.ಶಿವಯೋಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಎನ್‌ಆರ್‌ಇಜಿ ಸಹಾಯಕ ನಿರ್ದೇಶಕ ಎಚ್. ವಿಶ್ವನಾಥ, ಸಿಡಿಪಿಒ ಚನ್ನಪ್ಪ, ವಕೀಲರಾದ ಜಾಣ ಶಿವಾನಂದ, ಎಸ್. ಎಚ್.ವಿಶಾಲಾಕ್ಷಿ, ಎಸ್. ಲಿಂಗನಗೌಡ, ಸತ್ಯನಾರಾಯಣ, ಚಂದ್ರಶೇಖರ್, ಕೊಟ್ರೇಶ ಶೆಟ್ಟರ್, ರಮೇಶ, ಜಗದೀಶ, ಶರೀಫ್, ದೀಪಕ್, ಪ್ರಹ್ಲಾದ, ನಾಗರಾಜ, ಜಿ.ಗಂಗಾಧರ, ಯಾಸ್ಮೀನ್, ವಾಸಂತಿ ಸಾಲ್ಮನಿ ಶಿವಗಂಗಮ್ಮ, ಪರಮೇಶ್ವರ ಗೌಡ, ಟಿ ಶಿವಪ್ರಕಾಶ, ಹುಲುಗಪ್ಪ ಇತರರಿದ್ದರು.