Advertisement
ಈ ಕುರಿತು ಜಿಪಂ ಮಾಜಿ ಸದಸ್ಯ ಹೋರಾಟದ ಸಂಚಾಲಕ ಅಕ್ಕಿ ತೋಟೇಶ ಮಾತನಾಡಿ, ಎರಡನೇ ಹಂತದ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಸರಕಾರವನ್ನು ಎಚ್ಚರಿಸಲು ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸಲಾಗುವುದು. ಮೊದಲನೇ ಹಂತವಾಗಿ ಪಾದಯಾತ್ರೆ ಮೂಲಕ ಕ್ಷೇತ್ರದ ಶಾಸಕ ಭೀಮಾನಾಯ್ಕರಿಗೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
29ರಂದು ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನ ತಂಬ್ರಹಳ್ಳಿಯಿಂದ ಬೆಳಗ್ಗೆ 6 ಗಂಟೆಗೆ ಪಾದಯಾತ್ರೆಯನ್ನು ಪ್ರಾರಂಭಿಸಲಾಗುವುದು.
Related Articles
ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಹೋರಾಟದ ರೂಪುರೇಷಗಳನ್ನು ವ್ಯವಸ್ಥಿತವಾಗಿ ರೂಪಿಸಿದ್ದು ಗುರುವಾರ ಸಂಜೆ ಮತ್ತೂಮ್ಮೆ ಪೂರ್ವಭಾವಿ ಸಭೆ ಕರೆದಿದ್ದು ಎಲ್ಲ ರೈತರು ಕಡ್ಡಾಯವಾಗಿ ಆಗಮಿಸಬೇಕು ಎಂದು ತಿಳಿಸಿದರು.
Advertisement
ತಂಬ್ರಹಳ್ಳಿ ಗ್ರಾ.ಪಂ.ಅಧ್ಯಕ್ಷ ಮಡಿವಾಳರ ಕೊಟ್ರೇಶ ಮಾತನಾಡಿ, ನೀರಾವರಿ ಯೋಜನೆಗಳನ್ನು ಸಕಾರಗೊಳಿಸಲು ಕ್ಷೇತ್ರದ ಶಾಸಕರಿಗೆಆಸಕ್ತಿಯಿದ್ದು, ಹೋರಾಟವನ್ನು ಬಲಪಡಿಸುವ ಅಗತ್ಯವಿದೆ. ಎರಡನೇ ಹಂತದ ಏತ ನೀರಾವರಿ ಯೋಜನೆ ಜಾರಿಗೊಳ್ಳಲು ಉತ್ತಮ ಹೋರಾಟ ರೂಪಿಸಬೇಕು. ಕ್ಷೇತ್ರದ ಮಹತ್ವಕಾಂಕ್ಷಿ ಯೋಜನೆ ಮಾಲವಿ ಜಲಾಶಯಕ್ಕೆ ಶಾಶ್ವತ ನಿರೋದಗಿಸಲು ಶಾಸಕ
ಭೀಮಾನಾಯ್ಕ ನಿರಂತರ ಶ್ರಮದಿಂದ ಕಾಮಗಾರಿಗೆ ಅನುದಾನ ಒದಗಿಸಿ ಕಾಮಗಾರಿ ಪ್ರಾರಂಭಿಸಿದ್ದಾರೆ. ಹೋರಾಟಕ್ಕೆ ಪಕ್ಷಾತೀತವಾಗಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಬಿ.ಕೊಟ್ರೇಶ, ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿದರು. ತಾ.ಪಂ.ಸದಸ್ಯ ಪಿ.ಕೊಟ್ರೇಶ, ಗ್ರಾ.ಪಂ. ಸದಸ್ಯರಾದ ಗೌರಜ್ಜನವರ
ಗಿರೀಶ್, ಸುಕುರ್‌ಸಾಬ್, ಸೊಬಟಿ ಹರೀಶ್, ಪಿ. ಶ್ರೀನಿವಾಸ, ರೈತ ಮುಖಂಡರಾದ ಮೈನಳ್ಳಿ ಕೊಟ್ರೇಶ್, ಮೂಲಿಮನಿ ರವಿಪ್ರಸಾದ್,
ಕೋರಿ ಗೋಣಿಬಸಪ್ಪ, ಗಂಗಾಧಗೌಡ, ಗೌಜ್ಜನವರ ಬಸವರಾಜಪ್ಪ,
ಬಾಳಿಕಾಯಿ ಚಿದಾನಂದಪ್ಪ, ಕಡ್ಡಿ ಚನ್ನಬಸಪ್ಪ, ದೇವಿಪ್ರಸಾದ, ಸರಾಯಿ ಮಂಜುನಾಥ, ಸುಣಗಾರ ರಾಮು, ನಂದಿಬಂಡಿ ರಾಮಣ್ಣ, ಕಡ್ಡಿ ಕೊಟ್ರೇಶ, ಮಂಜುನಾಥ ಪಾಟೀಲ್, ಮೋರಿಗೇರಿ ವಿಶ್ವನಾಥ, ಇತರರಿದ್ದರು.