Advertisement
ಆನಂದೇವನಹಳ್ಳಿ ಬಸವರಾಜ್ (26) ಎಂಬಾತ ಕೊಲೆಯಾದವನು.
Related Articles
Advertisement
ಊರು ತೊರೆದಿದ್ದ ಬಸವರಾಜ್ ಕೆಲದಿನಗಳ ಹಿಂದೆ ಊರಿಗೆ ಬಂದಿದ್ದನು. ಮತ್ತೆ ತನ್ನ ಹೆಂಡತಿಯೊಂದಿಗೆ ಸಂಬಂಧ ಇದೆ ಎಂದು ಶಂಕೆಯಿಂದ ಕಣ್ಣಿಗೆ ಬಿದ್ದ ಬಸವರಾಜ್ ನನ್ನು ಚೀಲಗೋಡು ಬಸ್ ನಿಲ್ದಾಣದ ಬಳಿ ತಂಬ್ರಹಳ್ಳಿ ಹಗರಿಬೊಮ್ಮನಹಳ್ಳಿ ಮುಖ್ಯ ರಸ್ತೆಯ ಪಕ್ಕದ ವೀರ ಯೋಧ ಮೌನೇಶ್ ಪುತ್ಥಳಿ ಮುಂಭಾಗದಲ್ಲೇ ಹಾಡ ಹಗಲೇ ಕೊಡಲಿಯಿಂದ ತಲೆ ಮತ್ತು ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ 100 ಮೀಟರ್ ದೂರ ಓಡಿ ಹೋಗಿ ನಡುರಸ್ತೆಯಲ್ಲಿ ಕೊಡಲಿ ಬಿಟ್ಟು ತಂಬ್ರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸ್ಥಳಕ್ಕೆ ಸಿಪಿಐ ವಿಕಾಸ್ ಲಮಾಣಿ ತಂಬ್ರಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಗುರುಚಂದ್ರ ಯಾದವ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿದವನನ್ನು ವಶಕ್ಕೆ ಪಡೆದಿದ್ದಾರೆ.