ಹಗರಿಬೊಮ್ಮನಹಳ್ಳಿ : ಪಟ್ಟಣದ ಹಳೆ ಹಗರಿಬೊಮ್ಮನಹಳ್ಳ ಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ 25 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ದುರ್ದೈವಿ ಪುರಸಭೆ ಯ ಸದಸ್ಯೆ ಗುಂಡ್ರ ಸರಸ್ವತಿ ಹನುಮಂತ ಇವರ ಪುತ್ರ ಮನೋಜ್ ಎಂಬಾತನಾಗಿದ್ದು,
ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಎಸ್ ಪಿ ಹರಿಬಾಬು, ಆಡಿಷನಲ್ ಎಸ್ ಪಿ ಸಲಿಂ ಪಾಷಾ, ಕೂಡ್ಲಗಿಯ ಡಿ ವೈ ಎಸ್ ಪಿ ಮಲ್ಲೇಶ್ ಮಲ್ಲಪುರ, ಸಿ ಪಿ ಐ ವಿಕಾಸ ಲಮಾಣಿ, ಪಿ ಎಸ್ ಐ ಬಸವರಾಜ ಅಡವಿಬಾವಿ ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮನೋಜ್ ಬೆಂಗಳೂರಿನ ಕೆ ಎಂ ಎಫ್ ಕಚೇರಿಯ ಲ್ಯಾಬ್ ನಲ್ಲಿ ಸಹಾಯಕ ಟೆಕ್ನಿಷಿಯನ್ ಆಗಿ ಅರೆಕಾಲಿಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಈತನ ವಿವಾಹ ಇದೆ ತಿಂಗಳ 20ರಂದು ನಿಶ್ಚಯವಾಗಿದ್ದ ಕಾರಣ ರಜೆ ಹಾಕಿ ಬಂದಿದ್ದು, ಭಾನುವಾರ ರಾತ್ರಿ 11.30 ಗಂಟೆ ಸುಮಾರಿಗೆ ವಿವಾಹ ನಿಶ್ಚಯವಾಗಿರುವ ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋಗಿದ್ದ.
ಸೋಮವಾರ ಬೆಳೆಗ್ಗೆ ಘಟನೆ ನಡೆದ ಸ್ಥಳದಲ್ಲಿ ಬೆಳಗಿನ ವೇಳೆ ವಾಕಿಂಗ್ ಮಾಡುವ ಸಾರ್ವಜನಿಜರು ಅಪಘಾತವಾಗಿರುವುದು ಮತ್ತು ಶವ ಕಣ್ಣಿಗೆ ಬಿದ್ದಿದ್ದು, ವಿಷಯವನ್ನು ಪೋಷಕರು ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ, ಘಟನಾ ಸ್ಥಳ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಬಳಿ ಪೋಷಕರ ಹಾಗೂ ಸಂಭಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಸಾವನ್ನಪ್ಪಿರುವುದಾಗಿ ಕಂಡು ಬಂದಿದೆ.
ಮೃತ ಯುವಕನ ತಂದೆ ಗುಂಡ್ರ ಹನುಮಂತ ಇವರು ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.