Advertisement
ಪಟ್ಟಣದ ಎಸ್ ಎಲ್ ವಿ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,ಹೂವಿನ ಹಡಗಲಿ ಯಲ್ಲಿ ಕಳೆದ 2018 ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಗೆಲ್ಲಬೇಕಿತ್ತು ಆದರೆ ನಮ್ಮ ಪಕ್ಷದ ಹೂದುಗಂಗಪ್ಪ ಹಾಗೂ ಚಂದ್ರ ನಾಯ್ಕ ಇಬ್ಬರು ಸ್ಪರ್ಧೆ ಮಾಡಿದ್ದರಿಂದ ಇನ್ನೊಬ್ಬರ ಕೈ ಸೇರಬೇಕಾಯಿತು ಎಂದರು.
Related Articles
Advertisement
ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 2023 ಚುನಾವಣೆ ಯಲ್ಲಿ ಕಾಂಗ್ರೆಸ್ ನ್ನು ತೊಲಗಿಸಿ, ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು ಜೊತೆಗೆ ಸುರೇಶ್ ಬಾಬು ಅವರನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತರು ಪಣ ತೊಡಬೇಕು ಎಂದು ತಿಳಿಸಿದರು.
ಸಿರುಗುಪ್ಪ ಕ್ಷೇತ್ರದಲ್ಲಿ ಶಾಸಕ ಸೋಮಲಿಂಗಪ್ಪ ಅವರು, 10 ಸಾವಿರ ಎಕರೆ ವಿಸ್ತೀರ್ಣ ದಷ್ಟು ಏತ ನೀರಾವರಿ ಗುರಿ ಹೊಂದಿದ್ದರು ಆದ್ರೆ ಸುಮಾರು 6 ಸಾವಿರ ಎಕರೆ ಯಷ್ಟು ಏತ ನೀರಾವರಿ ನಿರ್ಮಾಣ ಮಾಡಿ ರೈತರಿಗೆ ನೀರು ಒದಗಿಸುವ ಕಾರ್ಯ ಕೈಗೊಂಡಿದ್ದಾರೆ ಅವರು ಕೂಡ ಮುಂದಿನ ಚುನಾವಣೆ ಯಲ್ಲಿ ಗೆಲ್ಲಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.
ಬಳ್ಳಾರಿ ಯಲ್ಲಿ 40 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾರ್ಯ ಮುಂದುವರಿಯಲಿದ್ದು, ಶೀಘ್ರದಲ್ಲಿ ಟೆಂಡರ್ ಕರೆಯಲಾಗುತ್ತದೆ. ಆಗೀನ ನಮ್ಮ ಸ್ನೇಹಿತ ಸಚಿವ ಜನಾರ್ದನ ರೆಡ್ಡಿ ಅದರ ಅಕ್ಕ ಪಕ್ಕದಲ್ಲಿ ಇರುವ ಜನರ ಮನೆಗಳನ್ನು ಅವರ ಅಪ್ಪಿಗೆ ಪಡೆದು ತೆರವು ಗೊಳಿಸಿದ್ದರು ಎಂದು ಸ್ಮರಿಸಿದರು.
ಬಳ್ಳಾರಿ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳ ಅವಾಂತರ ಇದ್ದು ಮಳೆ ಕಡಿಮೆ ಅದನಂತರ ಅನುದಾನ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದ ಪ್ರಕಾರ ಬಳ್ಳಾರಿ ನಗರಕ್ಕೆ 36 ಕೋಟಿ ಗುಂಡಿಗಳ ದುರಸ್ತಿಗೆ ಅನುದಾನ ಬಿಡುಗಡೆ ಗೊಳಿಸಿದ್ದೇನೆ ಎಂದರು.
ಜಿಲ್ಲೆಯಲ್ಲಿ ನ್ಯಾಷನಲ್ ಸ್ಟೇಡಿಯಂ ಮಾಡುವ ಉದ್ದೇಶ ಹೊಂದಲಾಗಿದೆ. 26 ಅಡಿ ಎತ್ತರದ ಪುನೀತ್ ಪುತ್ಥಳಿಯನ್ನು ಅನಾವರಣ ಮಾಡಲಾಗುವುದು ಎಂದರು.
ಇನ್ನೂ 2008-09 ರಲ್ಲಿ ಸೋಮಪ್ಪ ಕೆರೆ ಅಭಿವೃದ್ಧಿಗೆ ಅನುಮೋದನೆ ಗೊಂಡಿತ್ತು, ಅಲ್ಲಿನ ಸ್ಥಳೀಯ ಜನರನ್ನು ಪರಿಶೀಲನೆ ನಡೆಸಿ ಒತ್ತುವರಿ ಮಾಡಿ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಕೆರೆ ಅಭಿವೃದ್ಧಿಗೊಂಡಿದೆ ಎಂದರು.
ಅಲ್ಲದೆ ಕಂಪ್ಲಿ ಯ ಗಂಗಾವತಿ ಮತ್ತು ಕೊಪ್ಪಳ ಸಂಪರ್ಕ ಹೊಂದಿರುವ ಸೇತುವೆ 80 ಕೋಟಿ ವೆಚ್ಚದಲ್ಲಿ ನೂತನ ಸೇತುವೆಗೆ ಅನುಮೋದನೆ ಗೊಂಡು ಆದೇಶ ಹೊರಡಿಸಿದ್ದು, ಇದಕ್ಕೆ ಬಿಜೆಪಿ ಸರಕಾರ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಿದೆ.ಕಂಪ್ಲಿ ಕ್ಷೇತ್ರದ ಸ್ಲಂ ಏರಿಯಾಗಳಲ್ಲಿ 250 ಆಶ್ರಯ ಮನೆಗಳನ್ನು ಒದಗಿಸುವ ಕಾರ್ಯ ಬಿಜೆಪಿ ಸರಕಾರ ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಂಸದೆ ಶಾಂತ, ಬಿಜೆಪಿ ಜಿಲ್ಲಾಧ್ಯಕ್ಷ ಮುರಾರಿ ಗೌಡ, ತಿಮ್ಮಾರೆಡ್ಡಿ, ರೈತ ಮೋರ್ಚಾ, ಮಂಡಲ ಅಧ್ಯಕ್ಷರು, ಯುವ ಮೋರ್ಚಾ, ಬೂತ್ ಮಟ್ಟದ ಕಾರ್ಯಕರ್ತರು ಇತರರು ಇದ್ದರು.