Advertisement

ಉಗ್ರ ಸಯೀದ್‌ ನಿಷೇಧ ತೆರವು!

06:00 AM Oct 27, 2018 | |

ಇಸ್ಲಾಮಾಬಾದ್‌: ಮುಂಬೈ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದಾವಾ ಸಂಘಟನೆ ಪಾಕಿಸ್ಥಾನ‌ದಲ್ಲಿ ಇನ್ನು ಮುಕ್ತವಾಗಿ ಕಾರ್ಯಾಚರಣೆ ಮಾಡಬಹುದು! ವಿಶ್ವಸಂಸ್ಥೆಯೇ ಈ ಸಂಘಟನೆಗಳನ್ನು ನಿಷೇಧಿತ ಎಂದು ಘೋಷಿಸಿದ್ದರೂ, ಪಾಕಿಸ್ಥಾನ ಈ ಸಂಘಟನೆಗೆ ವಿಧಿಸಿದ ನಿಷೇಧವನ್ನು ತೆಗೆದುಹಾಕಿದೆ. ಜಮಾತ್‌ ಉದ್‌ ದಾವಾ ಹಾಗೂ ಫ‌ಲಾಹ್‌ -ಇ- ಇನ್ಸಾನಿಯತ್‌ ಸಂಘಟನೆಗಳನ್ನು ಸಯೀದ್‌ ಸ್ಥಾಪಿಸಿದ್ದು, ಇವು ಉಗ್ರ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಮೂಲ ಉದ್ದೇಶ ಹೊಂದಿವೆ. ವಿಶ್ವಸಂಸ್ಥೆಯ ನಿಷೇದಿಂದಾಗಿ ಕಳೆದ ಫೆಬ್ರವರಿಯಲ್ಲಿ ಪಾಕಿಸ್ಥಾನ ಅಧ್ಯಾದೇಶ ಹೊರಡಿಸಿ ಇವುಗಳನ್ನು ನಿಷೇಧಿತ ಎಂದು ಘೋಷಿಸಿತ್ತು. ಆದರೆ ಈಗ ಈ ಅಧ್ಯಾದೇಶ ಅವಧಿ ಮುಗಿದೆ. ಅದನ್ನು ನವೀಕರಿಸಲು ಇಮ್ರಾನ್‌ ಖಾನ್‌ ನೇತೃತ್ವದ ಪಾಕ್‌ ಸರ್ಕಾರ ಮುಂದಾಗಿಲ್ಲ. ಈ ಮೂಲಕ ಅದು ಜಾಣ ಮರೆವು ಪ್ರದರ್ಶಿಸಿದೆ.

Advertisement

ಸಂಘಟನೆಗಳನ್ನು ನಿಷೇಧಿಸಿ ಫೆಬ್ರವರಿಯಲ್ಲಿ ಪಾಕ್‌ ಅಧ್ಯಕ್ಷರಾಗಿದ್ದ ಮಮೂನ್‌ ಹುಸೈನ್‌ ಹೊರಡಿಸಿದ್ದ ಅಧ್ಯಾದೇಶ ವಿರುದ್ಧ ಜೆಯುಡಿ ಕೋರ್ಟ್‌ ಮೊರೆ ಹೋಗಿತ್ತು. ಗುರುವಾರದ ಪ್ರಕರಣದ ವಿಚಾರಣೆ ವೇಳೆ ಸಯೀದ್‌ ಪರ ವಕೀಲರು ಇಸ್ಲಾಮಾಬಾದ್‌ ಹೈ ಕೋರ್ಟ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೋರ್ಟ್‌ನಲ್ಲಿ ಕೇಸ್‌ ವಜಾಗೊಂಡಿದೆ. ಸರಕಾರ ಅಧ್ಯಾದೇಶವನ್ನು ಪುನಃ ಜಾರಿಗೊಳಿಸಿದರೆ ಮತ್ತೂಂದು ದಾವೆಯನ್ನು ಸಲ್ಲಿಸಬಹುದು ಎಂದು ಕೋರ್ಟ್‌ ಪ್ರಕರಣವನ್ನು ವಜಾಗೊಳಿಸಿದೆ.

ಸೆಪ್ಟೆಂಬರ್‌ನಲ್ಲೇ ನಿಷೇಧ ತೆರವು: ಕಳೆದ ಸೆಪ್ಟೆಂಬರ್‌ನಲ್ಲೇ ನಿಷೇಧ ತೆರವುಗೊಳಿಸಿದ ಬಗ್ಗೆ ಪಾಕಿಸ್ಥಾನ ರಾಷ್ಟ್ರೀಯ ಭಯೋತ್ಪಾದನೆ ತಡೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ವಿವರಿಸಲಾಗಿದೆ. ಜಮಾತ್‌ ಉದ್‌ ದಾವಾ ಹಾಗೂ ಫ‌ಲಾಹ್‌ ಇ ಇನ್ಸಾನಿಯತ್‌ ಫೌಂಡೇಶನ್‌ಗಳು ನಿಷೇಧಿತವಲ್ಲ ಎಂದು ಪ್ರಾಧಿಕಾರ ಪ್ರಕಟಿಸಿದ ಪಟ್ಟಿಯಲ್ಲಿ ವಿವರಿಸಲಾಗಿದೆ. ಆದರೆ ಇವುಗಳನ್ನು ಗೃಹ ಸಚಿವಾಲಯದ ಪರಿವೀಕ್ಷಣೆಯಲ್ಲಿರುವ ಸಂಸ್ಥೆಗಳು ಎಂದು ಪಟ್ಟಿಯಲ್ಲಿ ಹೆಸರಿಸಲಾಗಿದೆ. ಈ ಮಧ್ಯೆ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಕೂಡ ಈ ಸಂಸ್ಥೆಗಳು ದತ್ತಿ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಬಹುದು ಎಂದು ಸೆಪ್ಟಂಬರ್‌ನಲ್ಲೇ ಸೂಚನೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next