Advertisement

ಸಮಾನತೆಗೆ ಶ್ರಮಿಸಿದ ಹಡಪದ ಅಪ್ಪಣ್ಣ

12:19 PM Jul 28, 2018 | |

ಕೆ.ಆರ್‌.ನಗರ: ಹಿಂದುಳಿದ ಸಮಾಜದಲ್ಲಿ ಹುಟ್ಟಿದ್ದ ಹಡಪದ ಅಪ್ಪಣ್ಣ ಬಸವಣ್ಣನ ಕಾರ್ಯದರ್ಶಿಯಾಗಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾ ವ್ಯಕ್ತಿ ಎಂದು ಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್‌ ಹೇಳಿದರು. 

Advertisement

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸವಿತಾ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು, ಇಂತಹ ಸಮಾಜ ಜಯಂತಿ ಆಚರಣೆ ಮಾಡುವುದರಿಂದ ಸಂಘಟನೆಗೊಳ್ಳಲು ಅನುಕೂಲವಾಗಲಿದೆ.

ಸಮಾಜದ ಮುಖಂಡರು ಇದನ್ನರಿತು ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಸಂಘಟಿತರಾಗಬೇಕು ಎಂದು ಮನವಿ ಮಾಡಿದರು. ಇಂದು ತಾಲೂಕು ಆಡಳಿತದಿಂದ ಸಾಂಕೇತಿಕವಾಗಿ ಜಯಂತಿ ಆಚರಿಸುತ್ತಿದ್ದು, ಆಗಸ್ಟ್‌ 21ರಂದು ಸಚಿವ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ಪಟ್ಟಣದ ಪುರಸಭೆಯಲ್ಲಿ ಅದ್ಧೂರಿ ಜಯಂತಿ ಆಚರಿಲಾಗವುದು ಎಂದರು. 

ಕಾರ್ಯಕ್ರಮದಲ್ಲಿ ತಹಶಿಲ್ದಾರ್‌ ನಿಖೀತಾ, ಇಒ ಲಕ್ಷ್ಮೀಮೋಹನ್‌, ಮುಖ್ಯಾಧಿಕಾರಿ ನಾಗಶೆಟ್ಟಿ, ಸಿಡಿಪಿಒ ಸುಮಿತ್ರ, ಸವಿತಾ ಸಮಾಜದ ಮುಖಂಡರಾದ ರವಿಕುಮಾರ್‌, ರಾಜಣ್ಣ, ಬಲರಾಮ, ಕೇಶವಮೂರ್ತಿ, ರಾಜೇಶ್‌, ಗೋವಿಂದರಾಜು, ಸುರೇಶ್‌, ಕಿಶೋರ್‌, ಭಾಸ್ಕರ್‌, ಅಶೋಕ್‌, ವೆಂಕಟೇಶ್‌, ರಾಘು, ಪ್ರಶಾಂತ್‌, ಧರ್ಮೇಶ್‌, ಸಣ್ಣಯ್ಯ, ನಾಗರಾಜು, ರಾಚಯ್ಯ , ರಾಮಸ್ವಾಮಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next