ಮಂಡ್ಯ: ನಗರದ ಕಲಾಮಂದಿರದಲ್ಲಿ ಜು.26ರಂದು ಹಡಪದ ಅಪ್ಪಣ್ಣ ಜಯಂತಿಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಮತ್ತುಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ ಅವರ ಅಧ್ಯಕ್ಷತೆಯಲ್ಲಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ ಕುಮಾರ್‌ಉಪಸ್ಥಿತಿಯಲ್ಲಿ ಹಡ ಪದ ಅಪ್ಪಣ್ಣ ಜಯಂತಿ ಆಚರಿಸುವ ಕುರಿತು ರೂಪುರೇಷೆ ಪೂರ್ವಭಾವಿ ಸಭೆ ನಡೆಯಿತು.
ಸ್ವಾಗತಾರ್ಹ: ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಎಂ.ಪಿ.ಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲಾಡಳಿತ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಪ್ರತಿ ವರ್ಷವೂ ಹಡಪದ ಅಪ್ಪಣ್ಣ ಜಯಂತಿ ಆಚರಿಸುತ್ತಿರುವುದು ಸ್ವಾಗತಾರ್ಹ. ಇಂಥ ಪೂರ್ವಿಕರ ಜಯಂತಿ ಆಚರಣೆಯೊಂದಿಗೆ ಸಮಾಜ ಸಂಘಟನೆಗೊಂಡು ಅಭಿವೃದ್ಧಿಯ ಯೋಜನೆ ಗಳತ್ತ ಚಿಂತನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸನ್ಮಾನ: ಹಡಪದ ಅಪ್ಪಣ್ಣ ಜಯಂತಿಯಲ್ಲಿ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ ಯಲ್ಲಿಶೇ.80ರಷ್ಟು ಹೆಚ್ಚು ಅಂಕಗಳಿಸಿರುವವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಪುರಸ್ಕರಿಸುವ ಜತೆಗೆ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದೆಂದರು.
ನೋಂದಾಯಿಸಿ: ಇದೇ ಸಂದರ್ಭದಲ್ಲಿ ಜು.19ರೊಳಗೆ ಪ್ರತಿಭಾವಂತ ಎಸ್ಸೆಸ್ಸೆಲ್ಸಿಮತ್ತು ಪಿಯುಸಿ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಮೊ.9844629968ಕ್ಕೆ ವ್ಯಾಟ್ಸಆ್ಯಪ್ ಮೂಲಕ ಕಳುಹಿಸಿ ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಕುಮಾರ್, ತಾಲೂಕುಅಧ್ಯಕ್ಷರಾದ ನಾಗರಾಜು, ಜಯಣ್ಣ, ಚಂದ್ರ, ಮೋಹನ್‌ಕುಮಾರ್, ಅನಿಲ್ ಕುಮಾರ್, ನಾಗರಾಜು, ಹರೀಶ್ ಹಾಗೂಹಿರಿಯ ಮುಖಂಡರಾದ ರಾಜಣ್ಣ,ಬಸವರಾಜು, ಬೋರಪ್ಪ, ಯುವರಾಜ್,ರವಿಕುಮಾರ್ ಅಭಿಷೇಕ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.