Advertisement

KSMCA Server: ಕೆಎಸ್‌ಎಂಸಿಎ ಸರ್ವರ್‌ ಹ್ಯಾಕ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು!

11:02 AM Aug 14, 2024 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಮಾರ್ಕೆಟಿಂಗ್‌ ಕಮ್ಯೂನಿಕೇಷನ್‌ ಆ್ಯಂಡ್‌ ಆಡ್ವಟೈìಸಿಂಗ್‌ ಲಿಮಿ ಟೆಡ್‌ (ಕೆಎಸ್‌ಎಂಸಿಎ)ನ ಹಣಕಾಸು ಮತ್ತು ಲೆಕ್ಕಪತ್ರ ಕಾರ್ಯಗಳ ದಾಖಲೆಗಳ ಸರ್ವರ್‌ ಅನ್ನು  ಹ್ಯಾಕ್‌ ಮಾಡಿರುವ ಕಿಡಿಗೇಡಿಗಳು ಡೇಟಾ ಕಳುವು ಮಾಡಿ ರುವುದಾಗಿ ಕಚೇರಿಯ ಇ-ಮೇಲ್‌ ಮಾಹಿತಿ ನೀಡಿ, ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಕೆಎಸ್‌ಎಂಸಿಎನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ಅತೀಕುಲ್ಲಾ ಷರೀಫ್ ಕೇಂದ್ರ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕೆಎಸ್‌ಎಂಸಿಎ ಸರ್ಕಾರಿ ಸ್ವಾಮ್ಯದ ಕಂಪನಿ ಯಾಗಿದ್ದು, ಗಣಕೀಕೃತವಾಗಿ ನಿರ್ವಹಿಸುತ್ತಿರುವ ವ್ಯವಹರಣೆಯ ಪೈಕಿ ಪ್ರಮುಖವಾದ ಹಣಕಾಸು ಮತ್ತು ಲೆಕ್ಕಪತ್ರ ಕಾರ್ಯಗಳ ದಾಖಲೆಗಳ ನಿರ್ವಹಣೆ ಯನ್ನು ಈ ಕಚೇರಿಯ ಸರ್ವರ್‌ನಲ್ಲಿ ಇರಿಸಲಾಗಿದೆ. ಈ ಮಧ್ಯೆ ಆ. 7ರಂದು ಸವರ್‌ ಅನ್ನು ಹ್ಯಾಕ್‌ ಮಾಡಿರುವ ಕಿಡಿಗೇಡಿಗಳು, ನಿಮ್ಮ ಡೇಟಾಗಳನ್ನು ಕಳವು ಮಾಡಿದ್ದೇವೆ ಮತ್ತು ಎನ್‌ಕ್ರಿಪ್ಟ್ ಮಾಡಲಾಗಿದೆ.  ಈ ಬಗ್ಗೆ Email Us ithelp24okaol.com or ithelp24okcyberfear.com  ಎಂದು ಗಣಕ ಯಂತ್ರದಲ್ಲಿ ತೋರಿಸುತ್ತಿರುತ್ತದೆ. ಅಲ್ಲದೆ ಸರ್ವರ್‌ನಲ್ಲಿರುವ File type&ZBRT  ಎಂದು ‘We downloaded to our servers and encrypted all your database and personal information’ಎಂದು ಸಂದೇಶ ನೀಡಿದ್ದಾರೆ. ಅಲ್ಲದೆ ಡೇಟಾ ಬಿಡುಗಡೆಗೆ ಹಣಕ್ಕೆ ಬೇಡಿಕೆಯಿಟ್ಟಿದ್ದು, ತಪ್ಪಿದ್ದರೆ ಮಾಹಿತಿ ಸೋರಿಕೆ ಹಾಗೂ ಡೇಟಾ ನಾಶಪಡಿಸುವುದಾಗಿ ಬೆದರಿಸಿದ್ದಾರೆ ಎಂದು ಮೊಹಮ್ಮದ್‌ ಅತೀಕುಲ್ಲಾ ಷರೀಷ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಈ ದೂರಿನನ್ವಯ ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next