Advertisement

ಎಚ್‌1 ಬಿ ವೀಸಾ ನವೀಕರಣ ಇನ್ನೂ ಕಷ್ಟ

06:40 AM Oct 26, 2017 | Harsha Rao |

ವಾಷಿಂಗ್ಟನ್‌: ಎಚ್‌1ಬಿ ಹಾಗೂ ಎಲ್‌1 ವೀಸಾಗಳ ನವೀಕರಣ ನಿಯಮವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರಕಾರ ಮತ್ತಷ್ಟು ಬಿಗಿಗೊಳಿಸಿದೆ. ಹೊಸ ನೀತಿಯ ಪ್ರಕಾರ ವೀಸಾ ನವೀಕರಿಸುವಾಗ ಕೆಲಸಕ್ಕೆ ವ್ಯಕ್ತಿ ಅರ್ಹನಾಗಿದ್ದಾನೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಉದ್ಯೋಗಕ್ಕಾಗಿ ಹೆಚ್ಚಿನ ಸಂಖ್ಯೆಯ ಭಾರತೀಯರು ಎಚ್‌1ಬಿ ವೀಸಾವನ್ನು ಅವಲಂಬಿಸಿ ದ್ದಾರೆ. ಸುಮಾರು 13 ವರ್ಷಗಳ ಹಿಂದೆ ರೂಪಿಸಲಾಗಿದ್ದ ಅಮೆರಿಕ ಪೌರತ್ವ ಮತ್ತು ವಲಸೆ ನೀತಿಯನ್ನು ಟ್ರಂಪ್‌ ಆಡಳಿತ ಬದಲಿಸಿದೆ. ಈ ಹಿಂದೆ ಉದ್ಯೋಗಕ್ಕೆ ಅರ್ಹ ಎಂದು ಸಾಬೀತುಪಡಿಸಿ ವೀಸಾ ಪಡೆದರೆ, ನಂತರ ನವೀಕರಿಸುವಾಗ ಅರ್ಹತೆ ಸಾಬೀತುಪಡಿಸುವ ಅಗತ್ಯವಿರಲಿಲ್ಲ. ಈ ಹೊಸ ನೀತಿಯ ಪ್ರಕಾರ ಪ್ರತಿ ಬಾರಿ ವೀಸಾ ನವೀಕರಿಸುವಾಗಲೂ ಅರ್ಹತೆ ಸಾಬೀತುಪಡಿಸಬೇಕಾಗುತ್ತದೆ.

Advertisement

ಮತ್ತಷ್ಟು ಕಠಿಣ: ಮತ್ತೂಂದೆಡೆ, ವಿಮಾನ ಪ್ರಯಾಣಿಕರ ಭದ್ರತಾ ತಪಾಸಣೆಯನ್ನು ಅಮೆರಿಕ ಈಗ ಇನ್ನಷ್ಟು ಬಿಗಿ ಗೊಳಿಸಿದ್ದು, ವಿದೇಶದಿಂದ ಆಗಮಿಸುವ ಎಲ್ಲ ಪ್ರಯಾಣಿಕರೂ ಈ ಹೊಸ ನಿಯಮಾವಳಿಗೆ ಒಳಗಾಗಬೇಕಿದೆ. ವಿಮಾನ ಏರುವುದಕ್ಕೂ ಮುನ್ನ ಸಂಕ್ಷಿಪ್ತ ಸಂದರ್ಶನ ಹಾಗೂ ಸುಧಾರಿತ ಸಾಧನಗಳ ಮೂಲಕ ತಪಾಸಣೆಯನ್ನು ವಿಮಾನಯಾನ ಸಂಸ್ಥೆಗಳು ಒದಗಿಸಬೇಕಿದೆ. ಈ ನಿಯಮ ಗುರುವಾರದಿಂದ ಜಾರಿಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next