Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಮೈಸೂರಿಗೆ ಸಮಾಜವಾದಿ ಮುಖಂಡರಾದ ಜೆ.ಎಚ್. ಪಟೇಲ್, ಶಾಂತವೇರಿ ಗೋಪಾಲಗೌಡರನ್ನು ಕರೆದುಕೊಂಡು ಬಂದವನು. ಸಮಾಜವಾದಿ ಪಕ್ಷದ ಬಾವುಟ ಹಿಡಿದು ಓಡಾಡಿದವನು. ಒಮ್ಮೆಯೂ ಸಿದ್ದರಾಮಯ್ಯ ಸಮಾಜವಾದಿ ಬಾವುಟ ಹಿಡಿದಿದ್ದಾಗಲಿ, ಚಳವಳಿಯಲ್ಲಿ ಭಾಗವಹಿಸಿದ್ದಾಗಲಿ ನೋಡಿಯೇ ಇಲ್ಲ. ಅವರು ಸಮಾಜವಾದಿಯೂ ಅಲ್ಲ. ಲೋಹಿಯವಾದಿಯೂ ಅಲ್ಲ ಢೋಂಗಿವಾದಿ ಎಂದು ಮೂದಲಿಸಿದರು.
ಉತ್ತರಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾಸು ನೋಡಿದ ಮೇಲೆಯೇ ಕೆಟ್ಟಿದ್ದು. ನಾನೇ ಒಮ್ಮೆ ಸಿದ್ದರಾಮಯನ್ನನ್ನೇ, ಎಲ್ಲಿ ಹೋದ ಆ ಡಿಸಿಎಂ ಆಗಿದ್ದ ಆ ಸಿದ್ದರಾಮಯ್ಯ… ಎಂದು ಕೇಳಿದ್ದೆ, ಸೋನಿಯಾ ಗಾಂಧಿ ಬಿಲ್‌ಕುಲ್ ಬೇಡ ಎಂದಾಗ ನಾನೇ ಅವರಿಗೆ ಮನವರಿಕೆ ಮಾಡಿ, ಕಾಂಗ್ರೆಸ್‌ಗೆ ಸೇರಿಸಿದೆ, ಮುಖ್ಯಮಂತ್ರಿಯಾಗಲು ಸಾಕಷ್ಟು ಪ್ರಯತ್ನವೂ ಪಟ್ಟೆ. ಆದರೆ, ಬೇಡವೆಂದರೂ ಕಾಂಗ್ರೆಸ್‌ಗೆ ಕರೆ ತಂದು, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆನೋ ಆತನಿಂದಲೇ ಕಾಂಗ್ರೆಸ್ ಬಿಡುವಂತಾಗಿದ್ದು ರಾಜಕೀಯ ಜೀವನದ ಅತ್ಯಂತ ನೋವಿನ ಮತ್ತು ಮಹತ್ತರ ತಿರುವಿನ ವಿಚಾರ ಎಂದು ಹೇಳಿದರು.
Related Articles
Advertisement
ಕಾಂಗ್ರೆಸ್ ಬಿಟ್ಟ ನಂತರ ಖುದ್ದು ಯಡಿಯೂರಪ್ಪನವರೇ ಬಿಜೆಪಿ ಸೇರುವಂತೆ ಹೇಳಿದ್ದರು. ಹೈಕಮಾಂಡ್‌ನಿಂದಲೂ ಒತ್ತಡ ಇತ್ತು. ನಾನು ಅರಸುರವರ ಜೊತೆಗಿದ್ದ ಕಾಲದಿಂದಲೂ ಜಾತ್ಯತೀಯ ಮನೋಭಾವ ರೂಢಿಸಿಕೊಂಡು ಬಂದವನು. ಹಾಗಾಗಿಯೇ ಬಿಜೆಪಿಗೆ ಸೇರಲಿಲ್ಲ. ಜಾತ್ಯತೀತ ಮನೋಭಾವದ ಜೆಡಿಎಸ್ ಸೇರಿ, ಕಾಂಗ್ರೆಸ್ ಪಥ ಬಿಟ್ಟು ಈಗ ಕುಮಾರಪಥದಲ್ಲಿ ಸಾಗುತ್ತಿದ್ದೇನೆ ಎಂದು ತಿಳಿಸಿದರು.
ಹಿಂದಿ ಜನರು ಇರುವ ಎರಡು ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಇಲ್ಲಿನವರನ್ನ ಊಳಿಗದವರಂತೆ ನಡೆಸಿಕೊಂಡಿವೆ. ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆಡಳಿತ ನೀಡಲು ಬಿಡುವುದೇ ಇಲ್ಲ ಆ ಕಾರಣಕ್ಕೆ ರಾಜ್ಯದ ಭಾಷೆ, ನದಿ, ಗಡಿ ಉಳಿಸಿಕೊಳ್ಳಲು ಪ್ರಾದೇಶಿಕ ಪಕ್ಷಗಳು ಬಲಿಷ್ಟವಾಗಬೇಕು ಎಂದು ಜೆಡಿಎಸ್ ಸೇರಿದ್ದೇನೆ. ಪ್ರಾದೇಶಿಕ ಪಕ್ಷಗಳ ಏಕೆ ಬಲಿಷ್ಟವಾಗಬೇಕು ಎಂಬ ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಪರ್ಯಟನೆ ಪ್ರಾರಂಭಿಸಿದ್ದೇನೆ ಎಂದ ಅವರು ಹುಣಸೂರು ಕ್ಷೇತ್ರದಿಂದ ಕಣಕ್ಕೆ ಇಳಿಯುವೆ ಎಂದು ತಿಳಿಸಿದರು.
ಮಾಜಿ ಶಾಸಕ ಎಂ. ಬಸವರಾಜ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಜಿಲ್ಲಾ ಪಂಚಾಯತ್ ಸದಸ್ಯೆ ಹೇಮಾವತಿ, ಯುವ ಜೆಡಿಎಸ್ ಅಧ್ಯಕ್ಷ ಜೆ. ಅಮಾನುಲ್ಲಾಖಾನ್, ಟಿ. ದಾಸಕರಿಯಪ್ಪ, ಎಚ್.ಸಿ. ಗುಡ್ಡಪ್ಪ, ಗಣೇಶ್ ದಾಸಕರಿಯಪ್ಪ, ಕಡತಿ ತಿಪ್ಪೇಸ್ವಾಮಿ, ಟಿ. ಅಸರ್, ಶೀಲಾಕುಮಾರಿ, ಶ್ವೇತಾ ರಾಘವೇಂದ್ರ ಇದ್ದರು.