Advertisement
ನಗರದಲ್ಲಿ ಮಾದ್ಯಮಗಳ ಜೊತೆ ಸಂವಾದ ನಡೆಸಿದ ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ , ಹುಣಸೂರು ಜಿಲ್ಲೆ ಕಡ್ಡಾಯವಾಗಿ ಮಾಡೇ ಮಾಡುತ್ತೇವೆ.ಇದು ಚುನಾವಣೆಗಾಗಿ ಎತ್ತಿದ ವಿಚಾರವಲ್ಲ. ಕಳೆದ ಒಂದು ವರ್ಷದಿಂದ ಹುಣಸೂರು ಜಿಲ್ಲೆ ಬಗ್ಗೆ ಮಾತನಾಡುತ್ತಾ ಬಂದಿದ್ದೇನೆ. ಹುಣಸೂರು ಕೃಷಿ ಆರ್ಥಿಕ ವಲಯ ಚೆನ್ನಾಗಿದೆ.ರೈತರನ್ನು ಆರ್ಥಿಕವಾಗಿ ಮೇಲೆತ್ತಬೇಕು.ಬೆಳಿಗ್ಗೆ ಎಪಿಎಂಸಿ ಸದಸ್ಯರು ಬಂದು ಹುಣಸೂರು ಜಿಲ್ಲಾ ಮಾರುಕಟ್ಟೆ ಹೇಗಿರುತ್ತೆ ಅಂತ ಕೇಳಿದ್ದಾರೆ. ಹೀಗಾಗಿ ದೇವರಾಜ ಅರಸು ಹೆಸರಲ್ಲೇ ಜಿಲ್ಲೆ ಮಾಡಲು ಬದ್ಧವಾಗಿದೆ ಎಂದರು.
ನೀವು ಯಾವುದೋ ಪಕ್ಷ, ಯಾವುದೋ ರಾಜಕಾರಣಿ ಪರ ಮಾತನಾಡುತ್ತೀರಿ. ನಾನು ನಿಮ್ಮಂತೆ ಕಾಗಕ್ಕ ಗೂಬಕ್ಕನ ಕಥೆ ಬರೆದಿಲ್ಲ. ನಾನು ವಸ್ತುಸ್ಥಿತಿಯ ಸಾಹಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಹಣಕ್ಕಾಗಿ ಅಧಿಕಾರಕ್ಕಾಗಿ ಜೆಡಿಎಸ್ ಗೆ ರಾಜೀನಾಮೆ ಕೊಟ್ಟಿಲ್ಲ. ನಾನು ಸ್ವಾಭಿಮಾನಕ್ಕೆ ಪೆಟ್ಟಾಗಿ ರಾಜೀನಾಮೆ ಕೊಟ್ಟಿದ್ದೇನೆ. ಆಗ ಮತ ಕೊಟ್ಟ ಜನರಿಗೆ ಹೇಳಲು ಸಾಧ್ಯವಾಗಲಿಲ್ಲ. ನನ್ನ ಮನಸ್ಸಿಗೆ ಘಾಸಿಯಾಗಿ ನಾನು ರಾಜೀನಾಮೆ ಕೊಡಬೇಕಾಗಿ ಬಂತು. ಹುಣಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹನುಮಜಯಂತಿ ವೇಳೆ ಸುಳ್ಳು ಕೇಸ್‌ಗಳನ್ನು ಹಾಕಲಾಗಿದೆ. 80 ವರ್ಷ ವಯಸ್ಸಾದವರಿಗೂ ರೌಡಿ ಶೀಟರ್ ಓಪನ್ ಮಾಡಲಾಗಿದೆ. ಹುಣಸೂರಿನಲ್ಲಿ ಹಬ್ಬ ಹರಿದಿನ ಮಾಡಲು ಪೊಲೀಸ್ ಅನುಮತಿ ಬೇಕಿದೆ ಎಂದರು.
Related Articles
Advertisement