ಪಿರಿಯಾಪಟ್ಟಣ: ಡಿ.ದೇವರಾಜ ಅರಸು, ಮಾಜಿ ಪ್ರಧಾನಿ ದೇವೇಗೌಡರನ್ನು ಹೊರತು ಪಡಿಸಿ ನಾನು ಯಾರ ಮುರ್ಜಿಯಲ್ಲೂ ಇಲ್ಲ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದು ನಾನು ಇವರು ನನ್ನ ಮಿರ್ಜಿಯಲ್ಲಿದ್ದಾರೆ ಎಂದು ಮಾಜಿ ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯ .ಹೆಚ್.ವಿಶ್ವನಾಥ್ ತಿಳಿಸಿದರು.
ಪಟ್ಟಣದ ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯದ ಆವರಣದಲ್ಲಿ ಶನಿವಾರ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಗರ್ಜನೆ ವತಿಯಿಂದ ಸಂಗೊಳ್ಳಿ ರಾಯಣ್ಣನ 191 ನೇ ಬಲಿದಾನ್ ದಿವಸ್ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಡಿಯೂರಪ್ಪನನ್ನು ನಾವೆಲ್ಲ ಸೇರಿ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದ್ದೇವು ಆದರೆ ಆತನ ಕಿರಿಯ ಪುತ್ರ ಮಾಡಬಾರದ ಭ್ರಷ್ಟಚಾರ ಮಾಡಿ ಒಮ್ಮೆ ಜಯಲಿಗೆ ಕಳುಹಿಸಿದ ಮತ್ತೊಮ್ಮ ಆತನ ಮುಖ್ಯಮಂತ್ರಿ ಸ್ಥಾನವನ್ನೇ ಕಸಿದು ಹಾಕಿದ ಹಾಗಾಗಿ ಪುತ್ರ ವ್ಯಾಮೋಹಕ್ಕೆ ಬಲಿಯಾಗಿ ಭ್ರಷ್ಟಚಾರಿಯಾಗಿರುವ ಯಡಿಯೂರಪ್ಪ ರಾಜನಾಮೆ ನೀಡು ಎಂದು ಹೇಳಿದ್ದೇ ಹೊರತು, ನಾವ್ಯಾರು ಯಡಿಯೂರಪ್ಪನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಿಲ್ಲ ಆತನ ಮಗನಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಎಂದರು.
ಅಂದು ರಾಜ, ಮಹಾರಾಜ ಎನಿಸಿಕೊಂಡವರು ಯಾರು ಕೂಡ ಬ್ರಿಟಿಷರ ವಿರುದ್ದ ಹೋರಾಟ ಮಾಡುವುದಿರಲಿ ಧ್ವನಿಕೂಡ ಎತ್ತಲಿಲ್ಲ, ಅಂತಹ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರಲ್ಲಿ ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವಳಂತಹ ಮಹನೀಯರು, ಬ್ರಿಟಿಷರು ಟಿಪ್ಪುವಿನ ಮಕ್ಕಳನ್ನು ಒತ್ತೆಯಾಳಾಗಿಟ್ಟುಕೊಂಡಾಗ ಮಕ್ಕಳನ್ನು ಬೇಕಾದರೆ ಒತ್ತೊಯ್ಯಿರಿ, ನಾನೇಂದು ನಿಮಗೆ ತಲೆ ಬಾಗುದಿಲ್ಲ ಎಂದು ಹೋರಾಡುತ್ತಲೇ ಸಾವನ್ನಪ್ಪಿನು. ಅದೇರೀತಿ ಸಂಗೊಳ್ಳಿ ರಾಯಣ್ಣ ಕೂಡ ಬ್ರಿಟಿಷರ ಹೆಂಜಲಿಗೆ ನಾಲಿಗೆ ಚಾಚದೆ ತನ್ನ ನಂಬಿದ್ದ ಕಿತ್ತೂರು ಸಂಸ್ಥಾನದ ಜನತೆ ಮತ್ತು ಚನ್ನಮ್ಮಳ ರಾಜ್ಯ ರಕ್ಷಣೆಗಾಗಿ ನೇಣಿಗೆ ಕುತ್ತಗೆ ಕೊಟ್ಟು ಹೋರಾಡುತ್ತಲೇ ದೇಶಕ್ಕಾಗಿ ಪ್ರಾಣರ್ಪಣೆ ಮಾಡಿದನು. ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಹೆದರಿ ನೇಣಿಗೇರಲಿಲ್ಲ, ನಮ್ಮಲ್ಲೇ ಇದ್ದ ಕುಯುಕ್ತಿಗಳಿಂದ ನೇಣಿಗೇರಬೇಕಾಯಿತು. ಯಡಿಯೂರಪ್ಪ ಕೂಡ ಇದೇ ರೀತಿ ಪುತ್ರ ಬಿ.ವೈ.ವಿಜಯೇಂದ್ರನ ವ್ಯಾಮೋಹಕ್ಕೆ ಬಲಿಯಾಗಿ ಭ್ರಷ್ಟಚಾರಿಯಾಗಿ ಜೈಲಿಗೆ ಹೋಗಬೇಕಾಯಿತು ಹಾಗೇಯೇ ಮುಖ್ಯಮಂತ್ರಿ ಸ್ಥಾನವನ್ನು ಕೂಡ ಕಳೆದುಕೊಂಡದ್ದು ನಿಜಕ್ಕೂ ದುರದೃಷ್ಟ ಹಾಗೂ ವಿಷಾದನಿಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯನವರ ಸಹೋದರ ಹುಣಸೂರು ಕುಮಾರ್, ಜಿಲ್ಲಾ ಆದಿ ಜಾಂಬವರ ಸಂಘದ ಉಪಾಧ್ಯಕ್ಷ ಸೀಗೂರು ವಿಜಯಕುಮಾರ್, ದಸಂಸ ಮುಖಂಡ ಕರಡಿಪುರ ಕುಮಾರ್, ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ರಾಜ್ಯ ಉಪಾಧ್ಯಕ್ಷ ನೆರಲಕುಪ್ಪೆ ನವೀನ್ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಹೆಚ್.ಜೆ.ಜಯಶಂಕರ್, ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಪಿ.ಪಿ.ಪುಟ್ಟಯ್ಯ, ತಾಲ್ಲೂಕು ಭೋವಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿಕುಮಾರ್, ತಾಲ್ಲೂಕು ಹಂದಿಜೋಗಿಗಳ ಸಮುದಾಯದ ಹೋರಾಟಗಾರ್ತಿ ನಾಗಮಣಿ, ಮುಖಂಡರಾದ ಮಲ್ಲಿಕಾರ್ಜುನ್, ಚಿಕ್ಕೇಗೌಡ, ಆರ್.ಡಿ.ಚಂದ್ರು, ಸುರೇಶ್, ಮುಖಂಡರಾದ ರಾಜೇಗೌಡ, ತಾತನಹಳ್ಳಿ ಶಿವಣ್ಣ, ಅಲ್ಪನಾಯಕನಹಳ್ಳಿ ಮಹದೇವ್, ತಾತನಹಳ್ಳಿ ಗಣೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.
29ಪಿವೈಪಿ01:ಪಟ್ಟಣದ ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣನ 191 ನೇ ಬಲಿದಾನ್ ದಿವಸ್ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ಮಾತನಾಡಿದರು.