Advertisement

ಸಿಎಂಗೆ ಅತ್ತೆಯ ಮಾರ್ಗದರ್ಶನ ದೊರೆತರೆ ಅಪಾಯ

04:49 PM Aug 17, 2021 | Team Udayavani |

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಂದೆಯ ಮಾರ್ಗದರ್ಶನ ದೊರೆಯಬೇಕು. ಅತ್ತೆಯ ಮಾರ್ಗದರ್ಶನ ದೊರೆತರೆ ಅಪಾಯ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಮಾರ್ಮಿಕವಾಗಿ ಹೇಳಿದರು.

Advertisement

ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂಗೆ ಯಡಿಯೂರಪ್ಪ ಅವರ ಮಾರ್ಗದರ್ಶನ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ
ಅವರು, ಬಸವರಾಜ ಬೊಮ್ಮಾಯಿ ಅವರು ಯಾರಿಂದಲಾದರೂ ಮಾರ್ಗದರ್ಶನ ಪಡೆಯಲಿ. ಆದರೆ ಮಾರ್ಗದರ್ಶಕರು ತಂದೆ ಅಥವಾ
ಮಾವನ ಸ್ಥಾನದಲ್ಲಿರಬೇಕು. ಅತ್ತೆಯ ಸ್ಥಾನದಲ್ಲಿ ಅಲ್ಲ. ನಾನು ಯಾವ ಅರ್ಥದಲ್ಲಿ ಹೇಳಿದ್ದೇನೆ ಎಂಬುದನ್ನು ಜನರೇ ಅರ್ಥ
ಮಾಡಿಕೊಳ್ಳುತ್ತಾರೆ ಎಂದರು.

ಖಾತೆ ಹಂಚಿಕೆ ಬಗ್ಗೆ ಕೆಲವು ಸಚಿವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌ ಅವರು, ಪ್ರಬಲ ಖಾತೆ ಕೇಳುವವರು ಆ ಇಲಾಖೆಗಳ ಬಗ್ಗೆ ತಿಳಿದಿರುವ ಜ್ಞಾನಿಗಳೇ? ದೊಡ್ಡ ದೊಡ್ಡ ದುಡ್ಡಿರುವ ಇಲಾಖೆ ಕೇಳಿದರೆ ಏನರ್ಥ? ಪ್ರತಿ ಇಲಾಖೆ ಚೆನ್ನಾಗಿವೆ. ಎಲ್ಲ ಇಲಾಖೆಯಲ್ಲೂ ಕೆಲಸ ಇದೆ. ಆಸ್ಥೆಯಿಂದಕೆಲಸ ಮಾಡಬೇಕು ಎಂದು ನುಡಿದರು.

ಬಸವರಾಜ ಬೊಮ್ಮಾಯಿ ಕೆಲಸ ಶುರು ಮಾಡಿದ್ದಾರೆ. ವಿಭಿನ್ನವಾಗಿ ವಿಶೇಷವಾಗಿ ಆಲೋಚನೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿ ಉತ್ತಮ ಆಡಳಿತ ನೀಡಬೇಕಿದೆ. ಹಾಗಾಗಿ ಸಚಿವರು, ಶಾಸಕರು ಅಸಮಾಧಾನ ಬಿಟ್ಟು ಮುಖ್ಯಮಂತ್ರಿಗಳೊಂದಿಗೆ ಸೇರಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶಾಲೆ ಬಗ್ಗೆ ಶಾಸಕರ ಅಭಿಪ್ರಾಯ ಕೇಳಿದರೆ ಪ್ರಯೋಜವಿಲ್ಲ
ಶಾಸಕರು, ವಿಧಾನಪರಿಷತ್‌ ಸದಸ್ಯರು ನಿರುದ್ಯೋಗಿಗಳಲ್ಲ. ಮೈಸೂರಿನ ಉಸ್ತುವಾರಿ ಮಂತ್ರಿಗಳು ಬೆಂಗಳೂರಿನಿಂದ ಹೊರಡುವಾಗ ಸಭೆಗೆ ಬರುವಂತೆ ತಿಳಿಸುತ್ತಾರೆ. ನಾವೇನುಕೆಲಸವಿಲ್ಲದವರೇ. ಅದಕ್ಕೊಂದು ಶಿಸ್ತು ಬೇಡವೇ. ಶಾಲೆ ಪುನರ್‌ ಆರಂಭದ ಬಗ್ಗೆ ಮಕ್ಕಳಿಲ್ಲದ ಶಾಸಕರಿಂದ ಅಭಿಪ್ರಾಯಕೇಳಿದರೆ ಪ್ರಯೋಜನವೇನು? ಶಿಕ್ಷಕರು ಹಾಗೂ ಪೋಷಕರನ್ನು ಕೂರಿಸಿಕೊಂಡು ಸಭೆ ಮಾಡುವುದು ಒಳಿತು ಎಂದು ಎಂದು ಎಂಎಲ್ಸಿ ಎಚ್‌.ವಿಶ್ವನಾಥ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next