Advertisement

ರಾಜಕೀಯದಲ್ಲಿ ಅಧಿಕಾರದ ಅಸೆ ಎಲ್ಲರಿಗೂ ಇದೆ! ನನಗೂ ಮಂತ್ರಿಯಾಗುವ ಅಸೆ ಇದೆ :ವಿಶ್ವನಾಥ್

05:20 PM Aug 17, 2020 | sudhir |

ಮೈಸೂರು: ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ನನಗೂ ಮಂತ್ರಿಯಾಗುವ ಅಸೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.

Advertisement

ಬಿಎಸ್ ವೈ ಸಂಪುಟದಲ್ಲಿ ತಾವು ಸಚಿವರಾಗುವ ವಿಚಾರಕ್ಕೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ ಅವರು ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಅಧಿಕಾರದ ಆಸೆ ಇರುತ್ತದೆ. ಹಾಗೆಯೇ ನನಗೂ ಮಂತ್ರಿಯಾಗುವ ಆಸೆ ಇದೆ. ನಾನು ಮಿನಿಸ್ಟರ್ ಆಗಲ್ಲ ಅಂತ ನಿಮಗೆ ಅನುಮಾನಾ? ಎಂದು ಮರು ಪ್ರಶ್ನೆ ಹಾಕಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ನನಗೆ ಮಂತ್ರಿ ಆಗಬೇಕು ಅಂಬ ಆಸೆ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next