Advertisement

ಸರ್ಕಾರಿ ಜಮೀನುಗಳನ್ನು ಸಂರಕ್ಷಿಸಿ : ಅಧಿಕಾರಿಗಳಿಗೆ ಶಾಸಕ ಮಂಜುನಾಥ್ ಸೂಚನೆ

03:12 PM Jan 26, 2022 | Team Udayavani |

ಹುಣಸೂರು : ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯಲ್ಲಿನ ಸರಕಾರಿ ಜಮೀನುಗಳನ್ನು ಸರ್ವೆ ನಡೆಸಿ ಸಂರಕ್ಷಿಸುವಂತೆ ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿಯವರಿಗೆ ಶಾಸಕ ಎಚ್.ಪಿ.ಮಂಜುನಾಥ್ ಸೂಚಿಸಿದರು.

Advertisement

ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯ ಪೊಲೀಸ್ ವಸತಿ ಗೃಹದ ಎದುರಿನ ಎರಡು ಕಡೆ ತಲಾ ಎರಡು ಎಕರೆ ಜಮೀನು ತಮ್ಮದೆಂದು. ತಾವು ಕಳೆದ 30-40 ವರ್ಷಗಳಿಂದ ಉಳುಮೆ ಮಾಡುತ್ತಿರುವಂತೆ ಕೆಲವರು ದಾಖಲಾತಿ ಸೃಷ್ಟಿಸಿದ್ದಲ್ಲದೆ. ತೆಂಗಿನ ಸಸಿ ನೆಟ್ಟಿರುವ ಬಗ್ಗೆ ಬಂದ ದೂರನ್ನಾಧರಿಸಿ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಶಾಸಕರು. ಈ ಬಡಾವಣೆಯಲ್ಲಿ ಹಿಂದಿನಿಂದ ವಾಸಿಸುತ್ತಿರುವವರಿಗೆ ಸ್ಲಂಬೋರ್ಡ್ ಹುಣಸೂರು ವತಿಯಿಂದ ನಿವೇಶನ ಕೊಡಿಸಲು ತಾವು ಮುಂದಾಗಿರುವುದನ್ನು ಬಳಕೆ ಮಾಡಿಕೊಂಡು ಅಕ್ರಮವಾಗಿ ಗುಡಿಸಲು ಹಾಕಲು ಯತ್ನಿಸುತ್ತಿರುವ ಬಗ್ಗೆ ಹಾಗೂ ಸರಕಾರಿ ಭೂಮಿಗೆ ಸಾಗುವಳಿ ನೀಡುವಂತೆ ಮಾಡಿದ್ದ ಮನವಿ 2004 ರಲ್ಲೇ ತಿರಸ್ಕೃತಗೊಂಡಿದ್ದರೂ ಮತ್ತೆ ಸಸಿಗಳನ್ನು ನೆಟ್ಟಿದ್ದಾರೆ.

ಈ ಬಗ್ಗೆ ತಕ್ಷಣವೇ ಸರ್ವೆನಡೆಸಿ. ದಾಖಲಾತಿಗಳನ್ನು ಪರಿಶೀಲಿಸಿ. ಖಾಸಗಿ ಭೂಮಿಯಾಗಿದ್ದಲ್ಲಿ ಬಿಟ್ಟುಕೊಡಿ. ಸರಕಾರಿ ಜಮೀನಾಗಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಿ. ಕೂಡಲೇ ಕಂದಾಯ ಇಲಾಖೆ ಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಬಡಾವಣೆ ನಿವಾಸಿಗಳು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದು. ಕೆಲವರು ರಾತ್ರೋರಾತ್ರಿ ಶೆಡ್ ಹಾಕಲು ಬರುತ್ತಿರುವ ಬಗ್ಗೆ ನಿವಾಸಿಗಳ ದೂರಿಗೆ ಈ ಬಗ್ಗೆ ತಹಸೀಲ್ದಾರ್ ಡಾ.ಅಶೋಕ್ ರಿಗೆ ಸೂಕ್ತ ಕ್ರಮವಹಿಸಬೇಕೆಂದು. ಹಾಗೂ ಪೊಲೀಸ್ ರಕ್ಷಣೆ ನೀಡುವಂತೆ ಡಿವೈಎಸ್ ಪಿ ರವಿಪ್ರಸಾದ್ ರಿಗೆ ಸೂಚಿಸಿದರು. ಈ ವೇಳೆ ಸರ್ವೆಯರ್ ಚಿಕ್ಕಸ್ವಾಮಿ ಒಂದು ವಾರಕಾಲದೊಳಗೆ ಸರ್ವೆ ಮಾಡಿಕೊಡುವುದಾಗಿ ತಿಳಿಸಿದರು.

ಇದನ್ನೂ ಓದಿ : ಉಸ್ತುವಾರಿ ಸಚಿವ ಎಸ್. ಅಂಗಾರ ಅವರಿಂದ  ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಕ್ಕೆ ಚಾಲನೆ

ಈ ವೇಳೆ ಕೆಲವರು ಇದು ಖಾಸಗಿ ಭೂಮಿಯಲ್ಲ ಮನಗೆ ಮಂಜುರಾಗಿದೆ ಎಂದು ದಾಖಲಾತಿ ತಂದರು ಆದರೆ ಹಿಂದೆಯೂ ತಹಸೀಲ್ದಾರ್ ವಜಾ ಮಾಡಿರುವ ಬಗ್ಗೆ ಸ್ಪಷ್ಟಪಡಿಸಿದರು.

Advertisement

ನಂತರ ರಾತ್ರಿ ವೇಳೆ ಗುಡಿಸಲು ಹಾಕದಂತೆ ಮನವಿ ಮಾಡಿದ ಶಾಸಕರು ನಿಜವಾದ ನಿವಾಸಿಗಳಿಗೆ ನಿವೇಶನ ಕೊಡಿಸಲು ನಾನು ಬದ್ದ ಆದರೆ ಅಕ್ರಮ ಗುಡಿಸಲು ಹಾಕಿ ಗಲಾಟೆಗೆ ಆಸ್ಪದ ಕೊಡದಂತೆ ನಿವಾಸಿಗಳಿಗೆ ಮನವಿ ಮಾಡಿ. ಈ ಬಗ್ಗೆ ವಾರ್ಡ್ ಸದಸ್ಯ ಹಾಗೂ ಅಧ್ಯಕ್ಷರು ಎಚ್ಚರ ವಹಿಸಬೇಕು ಎಂದರು.

ಏನೇ ಸಮಸ್ಯೆಯಾದಲ್ಲಿ ವಾಡ್೯ ಸದಸ್ಯರನ್ನೆ ಹೊಣೆ ಮಾಡುವುದಾಗಿ ಎಚ್ಚರಿಸಿದರು. ಈ ವೇಳೆ ಇನ್ಸ್ ಪೆಕ್ಟರ್ ಗಳಾದ ಸಿ.ವಿ.ರವಿ.ಚಿಕ್ಕಸ್ವಾಮಿ.
ಆರ್.ಐ.ಗಳು. ನಗರಸಭೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next