Advertisement

ಗುತ್ತಿಗೆ ಕೇಳುವ ದುಃಸ್ಥಿತಿ ಗೌಡರ ಕುಟುಂಬಕ್ಕೆ ಬಂದಿಲ್ಲ

04:04 PM Jun 18, 2021 | Team Udayavani |

ಹಾಸನ: ಜಿಲ್ಲೆಯ 7 ದಶಕಗಳ ಕನಸಾಗಿರುವ ಹಾಸನ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ನಮ್ಮ ಮಹದಾಸೆಯಾಗಿದೆ. ಆದರೆ ವಿಮಾನ ನಿಲ್ದಾಣ ನಿರ್ಮಾಣದ ಗುತ್ತಿಗೆಯನ್ನು ಕೊಡಿ ಎಂದು ಕೇಳುವ ದುಃಸ್ಥಿತಿ ದೇವೇಗೌಡರ ಕುಟುಂಬಕ್ಕೆ ಬಂದಿಲ್ಲ. ಕೀಳು ಮಟ್ಟದ ಟೀಕೆ ಮಾಡುವುದನ್ನು ಕಾಂಗ್ರೆಸ್‌ ಮುಖಂಡರು ನಿಲ್ಲಿಸದಿದ್ದರೆ ಅವರ ರಾಜಕೀಯದ ಜಾತಕವನ್ನೂ ಬಿಚ್ಚಿಡುತ್ತೇನೆ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕುರ್ಚಿ ಉಳಿಸಿಕೊಳ್ಳಲು ಹಾಸನಕ್ಕೆ ಭೇಟಿ ನೀಡಿ ದೇವೇಗೌಡರ ಕುಟುಂಬದವರನ್ನು ಓಲೈಸಿ ವಿಮಾನ ನಿಲ್ದಾ  ಣದ ಗುತ್ತಿಗೆಯನ್ನು ದೇವೇಗೌಡರು ಹೇಳಿದವರಿಗೇ ಕೊಡುವುದಾಗಿ ಹೇಳಿದ್ದಾರೆ ಎಂಬ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ಮತ್ತಿತರ ಕಾಂಗ್ರೆಸ್‌ ಮುಖಂಡರ ಟೀಕೆಗೆ ಸುದ್ದಿಗೋಷ್ಠಿಯಲ್ಲಿ ರೇವಣ್ಣ ಅವರು ಪ್ರತಿಕ್ರಿಯಿಸಿ ದರು.

ದೇವೇಗೌಡರ ಸುದೀರ್ಘ‌ ರಾಜಕೀಯ ಜೀವನದಲ್ಲಿ ಯಾವುದೇ ಕಾಮಗಾರಿಯ ಗುತ್ತಿಗೆ ಕೊಡಿ ಎಂದು ಯಾರನ್ನಾದ್ರೂ ಕೇಳಿದ್ದಾರೆಯೇ? ನಾನೇದಾದರೂ ಮುಖ್ಯಮಂತ್ರಿಯ ವರನ್ನು ಗುತ್ತಿಗೆ ಕೇಳಿದ್ದೇನೆಯೇ? ನಮ್ಮ ಬಳಿ ಯಾರೂ ಕಂಟ್ರ್ಯಾ ಕ್ಟರ್‌ಗಳಿಲ್ಲ. ಯಾರಿಗಾದ್ರೂ ಕಂಟ್ರ್ಯಾಕ್ಟ್ ಕೊಡಿ, ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದರು.

ನಾನು ಒಬ್ಬ ಶಾಸಕನಾಗಿ ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಜನರ ಹಿತಕಾಯಲು ಮುಖ್ಯಮಂತ್ರಿಯವರ ನಿವಾಸಕ್ಕೆ ಹೋಗಿದ್ದೇನೆಯೇ ಹೊರತು ನನ್ನ ವೈಯಕ್ತಿಕ ಕೆಲಸಗಳಿಗಾಗಿ ನಾನು ಹೋಗಿಲ್ಲ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣಗೌಡ ಸುದ್ದಿಗೋಷ್ಠಿ ಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next