Advertisement

ಫೇಸ್‌ಬುಕ್‌ನಲ್ಲಿ ಎಚ್‌ಡಿಕೆ ನಂ. 1

08:51 AM Sep 27, 2017 | |

ಬೆಂಗಳೂರು: ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಮುಖವಾಗಿರುವ ಫೇಸ್‌ಬುಕ್‌ ಬಳಸುವ ರಾಜಕಾರಣಿಗಳ ಪೈಕಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌  ರಾಜ್ಯಾಧ್ಯಕ್ಷ ಎಚ್‌. ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Advertisement

ಎಚ್‌.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ಫೇಸ್‌ಬುಕ್‌ ಪೇಜ್‌ ಹೊರತುಪಡಿಸಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸಂಬಂಧಿಸಿದ ಮೂರು ಫೇಸ್‌ಬುಕ್‌ ಪೇಜ್‌ಗಳನ್ನು ನಿರ್ವಹಣೆ ಮಾಡಲಾ ಗುತ್ತಿದ್ದು, ನಾಲ್ಕು ಪೇಜ್‌ಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿ ಅಗ್ರಸ್ಥಾನದಲ್ಲಿದ್ದಾರೆ. ವಿಶೇಷ ವೆಂದರೆ ಒಬ್ಬ ಮುಖ್ಯಮಂತ್ರಿ ಅಭ್ಯರ್ಥಿ ಪರವಾಗಿ ಫೇಸ್‌ಬುಕ್‌ನಲ್ಲಿ ಇಷ್ಟೊಂದು ಪೇಜ್‌ಗಳಿರುವುದು ಕೂಡ ರಾಜ್ಯದಲ್ಲಿ ಪ್ರಥಮ.

ಎಚ್‌.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ಫೇಸ್‌ಬುಕ್‌ ಪೇಜ್‌ಗೆ 1.56 ಲಕ್ಷ ಹಿಂಬಾಲಕರಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿದ್ದು, ಅವರ ಫೇಸ್‌ಬುಕ್‌ ಪೇಜ್‌ಗೆ 1.36 ಲಕ್ಷ ಹಿಂಬಾಲಕರಿ ದ್ದಾರೆ. ಇನ್ನು ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ ಕುಮಾರಸ್ವಾಮಿ ಫಾರ್‌ ಸಿಎಂ ಪೇಜ್‌ಗೆ 1.34 ಲಕ್ಷ, ನಮ್ಮ ಎಚ್‌ಡಿಕೆ ಪೇಜ್‌ಗೆ 64,904 ಹಾಗೂ ಕುಮಾರಸ್ವಾಮಿ ವರ್ಲ್ವೈಡ್‌ ಫ್ಯಾನ್ಸ್‌ ಪೇಜ್‌ಗೆ 49366 ಹಿಂಬಾಲಕರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next