Advertisement
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ಅವಧಿಪೂರ್ವ ಚುನಾವಣೆ ಬಂದರೆ ಅದನ್ನು ಎದುರಿಸಲು ಜೆಡಿಎಸ್ ಸಜ್ಜಾಗಿದೆ ಎಂದು ಹೇಳಿದರು.
Related Articles
Advertisement
ಉಕ್ರೇನ್ ನಲ್ಲಿನ ಭಾರತೀಯರ ರಕ್ಷಣೆ ವಿಚಾರ: ದೇಶದಲ್ಲಿ ವೈದ್ಯಕೀಯ ಹಾಗೂ ಇತರ ಕೋರ್ಸುಗಳ ಶಿಕ್ಷಣ ಅವಕಾಶ ವಂಚಿತರಾಗಿ ಉಕ್ರೇನ್‌ಗೆ ಹೋಗುತ್ತಿದ್ದಾರೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತಿಲ್ಲ. ನಮ್ಮಲ್ಲೆ ಉನ್ನತ ಶಿಕ್ಷಣ ಕೈಗೆಟಕುವ ದರದಲ್ಲಿ ಸಿಕ್ಕಿದ್ರೆ ಉಕ್ರೇನ್‌ನಲ್ಲಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ನೀಟ್ ವ್ಯವಸ್ಥೆಯಿಂದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗ್ತಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿ ಬರಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮೂರು ತಿಂಗಳು ಹಿಂದೆಯೇ ಭಾರತಕ್ಕೆ ಯುದ್ದದ ಬಗ್ಗೆ ಸೂಕ್ಷ್ಮ ಅರಿವು ಇತ್ತು. ಹೀಗಿದ್ದ ಮೇಲೂ ಭಾರತೀಯ ವಿದ್ಯಾರ್ಥಿಗಳನ್ನು ಮುಂಚೆಯೇ ಕರೆ ತರುವಲ್ಲಿ ಕೇಂದ್ರ ವಿಫಲತೆ ಹೊಂದಿದೆ. ಇನ್ಮುಂದೆಯಾದರೂ ವೈದ್ಯಕೀಯ ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಪೂರ್ಣಗೊಳ್ಳಲು ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದರು.
ಕಲಬುರಗಿಯ ಪಾಲಿಕೆಯಲ್ಲಿ ಯಾರ ಜತೆ ಮೈತ್ರಿ ಎಂಬುದನ್ನು ಈಗಲೇ ಹೇಳುವುದು ಸರಿಯಲ್ಲ. ಚುನಾವಣೆ ವಿಷಯ ಹೈಕೋರ್ಟ್ ನಲ್ಲಿದೆ. ಅಂತಿಮ ತೀರ್ಪು ಹೊರ ಬಂದ ನಂತರ ಚರ್ಚಿಸಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.