Advertisement

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

08:34 PM Sep 19, 2024 | Team Udayavani |

ಮಂಡ್ಯ: ಸಂಸದರ ಕೆಲಸ ಏನು?, ಸಂಸದರು ಆರಾಮವಾಗಿ ಡೆಲ್ಲಿಯಲ್ಲಿ ಇರಬೇಕಾ?. ಜನರು ಕಷ್ಟದಲ್ಲಿದ್ದಾಗ ನಾನು ಬರಲೇಬೇಕು. ನಾನು ಮಂಡ್ಯದ ಸಂಸದ. ರಾಜ್ಯ ಹಾಗೂ ದೇಶಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ರಾಜಕೀಯ ಮಾಡಲು, ಬೆಂಕಿ ಹಚ್ಚಲು ನಾನು ಬಂದಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

Advertisement

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವ ಕುಮ್ಮಕ್ಕು ಕೊಡಲು ಬಂದಿಲ್ಲ. ಅಂದು ಗಲಾಟೆ ಆದಾಗ ಕುಮ್ಮಕ್ಕು ಕೊಟ್ಟಿದ್ದು ಯಾರು?, ಪೊಲೀಸರನ್ನು ಯಾರು ಕಳಿಸಿದ್ದು. ಪೊಲೀಸರು ಇದ್ದಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದರು.

ಅಳಲು ತೋಡಿಕೊಂಡ ಮಹಿಳೆಯರು:
ಬದ್ರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಮುಂದೆ ಗಲಭೆ ಪ್ರಕರಣದಲ್ಲಿ ಬಂ ಧಿತರಾಗಿರುವ ಆರೋಪಿತರ ಪೋಷಕರು ಹಾಗೂ ಮಹಿಳೆಯರು ಅಳಲು ತೋಡಿಕೊಂಡರು.

ಕುಮಾರಸ್ವಾಮಿ ಮಾತನಾಡಿ, ಕುಟುಂಬ ನಿರ್ವಹಣೆ ಖರ್ಚನ್ನು ನಾನು ಸದ್ಯಕ್ಕೆ ಭರಿಸುತ್ತೇನೆ. ಒಂದು ವಾರಕ್ಕೆ ಬೇಕಾದ ಆಹಾರ ಪದಾರ್ಥ ವ್ಯವಸ್ಥೆ ಮಾಡುತ್ತೇನೆ. ಇನ್ನೊಂದು ವಾರದಲ್ಲಿ ಜೈಲಿನಿಂದ ಬಿಡಿಸುತ್ತೇನೆ. ವಕೀಲರನ್ನು ನಾನೇ ನೇಮಿಸುತ್ತೇನೆಂದರು. ಜೈಲು ಸೇರಿರುವ 20ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next