Advertisement

ಜಾತಿ ನೋಡಿ ಪರಿಹಾರ ಕೊಡೋ ಅನಾಗರಿಕ ಸರ್ಕಾರ: ಎಚ್‌.ಡಿ. ಕುಮಾರಸ್ವಾಮಿ

08:53 PM Jul 30, 2022 | Team Udayavani |

ಕಲಬುರಗಿ: ಅಲ್ರಿ ..ಇದ್ಯಾವ ಸರಕಾರರೀ.. ಎರಡು ಘಟನೆಗಳಲ್ಲಿ ಪ್ರತ್ಯೇಕ ಧರ್ಮದ ಯುವಕರು ಕೊಲೆಯಾಗಿದ್ದಾರೆ. ಬಿಜೆಪಿ ಮುಖಂಡ ಪ್ರವೀಣ್‌ ಮನೆಗೆ ಮುಖ್ಯಮಂತ್ರಿ ಭೇಟಿ ಕೊಡ್ತಾರೆ, ಸಾಲದ್ದಕ್ಕೆ ಪರಿಹಾರ ಘೋಷಣೆ ಮಾಡ್ತಾರೆ. ಮುಸ್ಲಿಂ ಯುವಕನ ಮನೆಗೆ ಸಿಎಂ ಬೇಡ, ಉಸ್ತುವಾರಿ ಸಚಿವರೂ ಹೋಗಲ್ಲ. ಪರಿಹಾರನೂ ಕೊಡಲ್ಲ. ಇದೆಂತಹ ಅನಾಗರಿಕ ಸರ್ಕಾರ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಶನಿವಾರ ಜೆಡಿಎಸ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮ ಮತ್ತು ಜನರನ್ನು ನೋಡಿ ಪರಿಹಾರ ಕೊಡೋ ಸರ್ಕಾರ ಇದು. ಅತ್ಯಂತ ನಿರ್ದಯಿ ಮತ್ತು ಅನಾಗರಿಕ ಸರಕಾರ ಎಂದು ಟೀಕಿಸಿದರು.

ತಮ್ಮ ಪಕ್ಷದ ಮುಖಂಡನ ಹತ್ಯೆ ಖಂಡಿಸಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ನೀಡಿದರೆ, ಮಾಜಿ ಸಚಿವ ಈಶ್ವರಪ್ಪ ದುರಹಂಕಾರದಿಂದ ರಾಜೀನಾಮೆಯಿಂದ ಪಕ್ಷಕ್ಕೆ ನಷ್ಟವಾಗೋದೇ ಇಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಇದೆಲ್ಲವನ್ನೂ ಬಿಜೆಪಿಯಲ್ಲಿ ಕೆಲಸ ಮಾಡುವ ಯುವಕರ ತಾಯಂದಿರು, ಪಾಲಕರು ಗಮನಿಸಬೇಕು. ಆ ಪಕ್ಷದ ನಾಯಕರಿಗೆ ಯುವಕರ ಶ್ರಮ ಮತ್ತು ಬಲಿದಾನ ಮುಖ್ಯವೇ ಅಲ್ಲ. ಅದಕ್ಕಾಗಿ ಮಕ್ಕಳ ರಾಜಕಾರಣವನ್ನು ಎಚ್ಚರಿಕೆಯಿಂದ ಗಮನಿಸಬೇಕಾದ ಅಗತ್ಯವಿದೆ. ಯಾರ ಮಕ್ಕಳಾದರೂ, ಯಾವುದೇ ಜಾತಿಯಾದರೂ ಜೀವ ಹೋದ ಬಳಿಕ ಇನ್ನೇನು ಉಳಿಯುತ್ತದೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next