ಬೆಂಗಳೂರು: ಕೃಷ್ಣ ನದಿ ನೀರು ವಿಚಾರವಾಗಿ ಮಹಾರಾಷ್ಟ್ರದ ನಾಯಕರೊಂದಿಗೆ ಮಾತನಾಡಿರುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಸಮಸ್ಯೆಗೆ ಪರಿಹಾರ ಸಿಗಲಿ. ಒಂದು ವೇಳೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇದ್ದರೆ ಜೆಡಿಎಸ್ ಪಕ್ಷ ಹೋರಾಟ ಮಾಡಲಿದ್ದು, ಕೃಷ್ಣ ತೀರದಿಂದ ಪಾದಯಾತ್ರೆ ಮಾಡುವುದಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ವಿಚಾರವಾಗಿ ಕೂಡ ಹೋರಾಟ ಮಾಡುತ್ತೇವೆ. ಮಹದಾಯಿ ವಿಚಾರವನ್ನು ಬಿಡುವುದಿಲ್ಲ ನಮ್ಮ ಪಕ್ಷ ಹೋರಾಟ ಮಾಡುತ್ತದೆ. ನಮ್ಮ ಜೀವನದಿಗಳಾದ ಕೃಷ್ಣ ಮೇಲ್ಡಂಡೆ, ಮೇಕದಾಟು, ಮಹದಾಯಿ ವಿಚಾರವಾಗಿ ಜೆಡಿಎಸ್ ನಿಂದ ಹೋರಾಟ ನಿರಂತರವಾಗಿರುತ್ತದೆ. ಪಾದಯಾತ್ರೆ ಮೂಲಕ ಹೋರಾಟ ಮಾಡಲು ಜೆಡಿಎಸ್ ತೀರ್ಮಾನ ಮಾಡುತ್ತೇವೆ. ಹೋರಾಟಕ್ಕೆ ದಿನಾಂಕವನ್ನು ನಿಗದಿ ಮಾಡುತ್ತೇವೆ. ನಮ್ಮ ರಾಜ್ಯದ ಹಿತ ಕಾಪಾಡೋದಕ್ಕಾಗಿ ಈ ಹೋರಾಟ ಅನಿವಾರ್ಯವಾಗಿದೆ , ಪ್ರಾದೇಶಿಕ ಪಕ್ಷವಾಗಿ ನಮ್ಮ ರಾಜ್ಯದ ಹಿತಾಸಕ್ತಿಗೋಸ್ಕರ ಹೋರಾಟ ಮಾಡುತ್ತೇವೆ. ಕಾಂಗ್ರೆಸ್-ಬಿಜೆಪಿಗೆ ಹೋರಾಟ ಮಾಡಲು ಕಷ್ಟ ಇದೆ. ಅವ್ರು ಹೋರಾಟ ಮಾಡಲು ಆಗುವುದಿಲ್ಲ. ಎಲ್ಲರೂ ಸರ್ಕಾರ ಮಾತ್ರ ಮಾಡಿದ್ದಾರೆ. ಅವರಿಂದ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಾವೇ ಹೋರಾಟ ಮಾಡುತ್ತೇವೆ. ಸಾಂಕೇತಿಕವಾಗಿ ನಾನು ಒಂದು ದಿನ ಹೋರಾಟದಲ್ಲಿ ಭಾಗವಹಿಸುತ್ತೇನೆ. ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹೋರಾಟ ಮುಂದುವರೆಯುತ್ತದೆ ಎಂದರು.
ಇದನ್ನೂ ಓದಿ:ಚುನಾವಣಾ ಪ್ರಚಾರಕ್ಕೆ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ: ಡಿಸಿ ಆದೇಶ
ಗಲಾಟೆ ಇದ್ದರು ಕೇಂದ್ರ ಸರ್ಕಾರ ಚರ್ಚೆ ಇಲ್ಲದೆ ಬಿಲ್ ಪಾಸ್ ಮಾಡಿದೆ ಸಂವಿಧಾನ ತಿದ್ದುಪಡಿ ಬಿಲ್ ಗೆ ಮಾತ್ರ 3 ಗಂಟೆ ಚರ್ಚೆಗೆ ನಿಗದಿ ಮಾಡಿದ್ರು ನಾನು ಅದರಲ್ಲು ಭಾಗವಹಿಸಿದೆ. ಅದನ್ನು ಬಿಟ್ಟು ಯಾವುದರಲ್ಲೂ ನನಗೆ ಮಾತಾಡಲು ಅವಕಾಶವೇ ಸಿಗಲಿಲ್ಲ ಈ ವಿಷಯದಲ್ಲಿ ನನಗೆ ತೀವ್ರ ಅಸಮಾಧಾನವಾಯಿತು. ಲೋಕಸಭೆಯಲ್ಲಿ ಬಿಜೆಪಿಗೆ ಶಕ್ತಿ ಇದೆ. ಯಾವುದೇ ಕಾರ್ಯಕಲಾಪ ಇಲ್ಲದೆ ಕಲಾಪ ಮುಕ್ತಾಯ ಆಗಿದೆ. ನಾನು ವಿಪಕ್ಷದ ನಾಯಕರಿಗೆ ಕರೆದು ಮಾತಾಡಿದೆ ಪೆಟ್ರೋಲ್ ಡಿಸೇಲ್ ಸೇರಿದಂತೆ ಯಾವುದೇ ಜನ ಸಾಮಾನ್ಯರ ಸಮಸ್ಯೆ ಬಗ್ಗೆ ನಾವು ಮಾತಾನಾಡಲು ಆಗಲಿಲ್ಲ. ನನ್ನ ಪ್ರಕಾರದಲ್ಲಿ ಈ ಸಲದ ಕಲಾಪ ವ್ಯರ್ಥವಾಗಿದೆ. ಈ ತರಹದ ರಾಜ್ಯಸಭೆಯ ನಡಾವಳಿಗಳನ್ನು ಇತಿಹಾಸದಲ್ಲಿ ನಾನು ನೋಡಿರಲಿಲ್ಲ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಹಾಗೂ ನಮ್ಮ ವಿಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ನನಗೆ ಅಸಮಾಧಾನ ಇದೆ ಎಂದರು.
ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುತ್ತಾರೆ. 2023 ಕ್ಕೆ ಜೆಡಿಎಸ್ ಇರಲ್ಲ ಎನ್ನುತ್ತಾರೆ. ಯಾರು ಮಾತನಾಡಿದರೂತ ನಾನು ಮಾತಾಡುವುದಿಲ್ಲ. ಆದರೆ ಹಾಗೆ ಹೇಳಿರುವವರಿಗೆಗೆ ಎಚ್ಚರಿಕೆ ಕೊಡುತ್ತೇನೆ. ಹೋರಾಟ ಮಾಡಿ ಪಕ್ಷದ ಅಸ್ಥಿತ್ವ ಉಳಿಸಿಕೊಂಡು ನಾವು ಅಧಿಕಾರಕ್ಕೆ ಬರಲು ಕೆಲಸ ಮಾಡುತ್ತೇವೆ. ವಿರೋಧಿಗಳಿಗೆ ಈ ಮೂಲಕ ತಿಳಿಸುತ್ತೇನೆ ಎಂದು ದೇವೇಗೌಡರು ಗುಡುಗಿದರು.