Advertisement

H.D.Devegowda J-K Visit: 91ರ ಪ್ರಾಯದಲ್ಲೂ ಬೆಟ್ಟ ಹತ್ತಿ ಶಿವನ ದರ್ಶನಗೈದ ಮಾಜಿ ಪ್ರಧಾನಿ

10:30 PM Aug 30, 2024 | Team Udayavani |

ಶ್ರೀನಗರ:  ಜಮ್ಮು-ಕಾಶ್ಮೀರ (Jammu-Kashmir) ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು (H.D.Devegowda) ಶುಕ್ರವಾರ ಶ್ರೀನಗರ ಸಮೀಪವಿರುವ ಶ್ರೀ ಶಂಕರಾಚಾರ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಮಾಜಿ ಪ್ರಧಾನಿ,  ಕರ್ನಾಟಕದ ಮುತ್ಸದ್ಧಿ ರಾಜಕಾರಣಿ ಎಚ್‌.ಡಿ. ದೇವೇಗೌಡ ತಾವು ಪ್ರಧಾನಿಯಾದ 28 ವರ್ಷಗಳ ಬಳಿಕ ದೇಶದ ತುತ್ತ ತುದಿಯ ಕಾಶ್ಮೀರದ ಬೆಟ್ಟದಲ್ಲಿರುವ ಜ್ಯೇಷ್ಠ್ಯೇಶ್ವರ ಹೆಸರಿನಲ್ಲಿ ಶಿವನ ಪೂಜಿಸಲ್ಪಡುವ ಶಂಕರಾಚಾರ್ಯ ದೇವಸ್ಥಾನಕ್ಕೆ ಶುಕ್ರವಾರ ಬೆಳಗ್ಗೆ (ಆ. 30) ತೆರಳಿ ದೇವರ ದರ್ಶನ ಪಡೆದಿದ್ದಾರೆ.

“ಸಿಆರ್‌ಪಿಎಫ್ (CRPF) ಮತ್ತು ಜಮ್ಮು ಪೊಲೀಸರ ಸಹಾಯವಿಲ್ಲದೆ ನಾನು ಶಂಕರಾಚಾರ್ಯ ಬೆಟ್ಟ ಏರಲು ಮತ್ತು ಶಿವನ ದೈವಿಕ ಸನ್ನಿಧಿಗೆ ತಲುಪಲು ಸಾಧ್ಯವಿರಲಿಲ್ಲ. ಭೇಟಿಗೆ ನೆರವು ನೀಡಿದ ಸಿಆರ್‌ಪಿಎಫ್ ಯೋಧರು ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಮಾಜಿ ಪ್ರಧಾನಿ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. ಇನ್ನೂ ಈ ಕುರಿತು ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬುದು ನನ್ನ ಜೀವಮಾನದ ಕನಸಾಗಿತ್ತು ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.


ಬುಧವಾರವೇ ಶ್ರೀನಗರಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ, 27 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಬೆಳಗ್ಗೆಯೇ ಶ್ರೀನಗರದಿಂದ ಬಾರಮುಲ್ಲಾಕ್ಕೆ ರೈಲಿನಲ್ಲಿ ಪ್ರಯಾಣಿಸಿದ ತಾವು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ರೈಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ್ದು ನೆನಪು ಮಾಡಿಕೊಂಡು  ಉರಿ ಜಲವಿದ್ಯುತ್ ಘಟಕ ಖುದ್ದು ವೀಕ್ಷಿಸಿದ್ದಾರೆ.

ಈ ಮಾಜಿ ಪ್ರಧಾನಿ ದೇವೇಗೌಡರು, ನಾನು ಪ್ರಧಾನಿ ಸ್ಥಾನದಿಂದ ಕೆಳಗಿಳಿದ 28 ವರ್ಷಗಳ ಬಳಿಕ ನಾನು ಕಾಶ್ಮೀರಕ್ಕೆ ಭೇಟಿ ನೀಡಿದ್ದೇನೆ. ಅಂದಿನ ಕಾಶ್ಮೀರಕ್ಕೂ ಇಂದಿನ ಕಾಶ್ಮೀರಕ್ಕೂ ಬಹಳಷ್ಟು ವ್ಯತ್ಯಾಸ ಕಾಣುತ್ತಿದೆ. ನಾನು ಪ್ರಧಾನಿ ಆಗಿದ್ದಾಗ 1997 ರ ಫೆಬ್ರವರಿ 13 ರಂದು ಈ ಘಟಕವನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದೆ ಎಂದು ಸಂತಸ ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next