Advertisement

ಜಿಮ್ನಾಸ್ಟಿಕ್‌: “ಪ್ರಣತಿ’ಗಳ ಫೈನಲ್‌ ಪ್ರವೇಶ

06:00 AM Apr 07, 2018 | Team Udayavani |

ಗೋಲ್ಡ್‌ಕೋಸ್ಟ್‌: ಖ್ಯಾತ ಜಿಮ್ನಾಸ್ಟಿಕ್‌ ಸ್ಪರ್ಧಿ ದೀಪಾ ಕರ್ಮಾಕರ್‌ ಅನುಪಸ್ಥಿತಿಯಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಸ್ಪರ್ಧೆಗಿಳಿದಿದ್ದ ಭಾರತದ ಉದಯೋನ್ಮುಖ ಜಿಮ್ನಾಸ್ಟ್‌ ತಾರೆಗಳಾದ ಪ್ರಣತಿ ನಾಯಕ್‌ ವನಿತಾ ವಾಲ್ಟ್ ವಿಭಾಗದಲ್ಲಿ ಹಾಗೂ ಪ್ರಣತಿ ದಾಸ್‌ ಆಲ್‌ರೌಂಡ್‌ ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಇವರು ಪದಕ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ. ಆದರೆ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದ ಅರುಣಾ ರೆಡ್ಡಿ ಸೋತು ಹೊರಬಿದ್ದಿದ್ದಾರೆ.

Advertisement

ವಾಲ್ಟ್ ಅರ್ಹತಾ ಸುತ್ತಿನಲ್ಲಿ ಪ್ರಣತಿ ನಾಯಕ್‌ 8ನೇ ಹಾಗೂ ಪ್ರಣತಿ ದಾಸ್‌ ಆಲ್‌ರೌಂಡ್‌ ಅರ್ಹತಾ ಸುತ್ತಿನಲ್ಲಿ 18ನೇ ಸ್ಥಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next