Advertisement

ಪುರುಷೋತ್ತಮನ ಫ್ಯಾಮಿಲಿ ಸಾಂಗ್‌: ಅದ್ಧೂರಿ ಆಡಿಯೋ ರಿಲೀಸ್

02:43 PM Sep 07, 2021 | Team Udayavani |

ಜಿಮ್‌ ರವಿ ಮೊದಲ ಬಾರಿಗೆ ನಾಯಕ ನಟರಾಗಿ ನಟಿಸಿರುವ “ಪುರುಷೋತ್ತಮ’ ಚಿತ್ರದ ಆಡಿಯೋ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ತುಂಬಾ ದಿನಗಳ ನಂತರ ಚಿತ್ರರಂಗದಲ್ಲಿ ಈ ತರಹದ ಒಂದು ಅದ್ಧೂರಿ ಆಡಿಯೋ ರಿಲೀಸ್‌ ನಡೆಯುವ ಮೂಲಕ ಹೊಸ ಜೋಶ್‌ಗೆ ಕಾರತಣವಾಯಿತು.

Advertisement

ನಟನಾಗಿ, ದೇಹದಾರ್ಢ್ಯ ಪಟುವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ರವಿ ಕಳೆದ30 ವರ್ಷಗಳಿಂದ ಸುಮಾರು 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಿಮ್‌ ತರಬೇತಿ ನೀಡಿದ್ದಾರೆ. ಇದೀಗ “ರವೀಸ್‌ ಜಿಮ್‌ ಪ್ರೊಡಕ್ಷನ್ಸ್‌’ ಹೆಸರಿನಲ್ಲಿ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ, ಹೀರೋ ಆಗಿ ನಟಿಸಿದ್ದಾರೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಎಸ್‌.ವಿ ಅಮರನಾಥ್‌ “ಪುರುಷೋತ್ತಮ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಆಡಿಯೋ ಬಿಡುಗಡೆಯಲ್ಲಿ ಮಾತನಾಡಿದ ರವಿ, “ನಾಯಕನಿಂದ ಒದೆ ತಿನ್ನಿಸಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡುತ್ತಿದ್ದ ಹಿತೈಷಿಗಳು, ನೀವು ಯಾವಾಗ ಹೀರೋ ಆಗೋದು ಅಂತ ಹತ್ತು ವರ್ಷದಿಂದ ಕೇಳುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಈ ಚಿತ್ರದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶಗಳಿವೆ. ಸಾಮಾನ್ಯವಾಗಿ ಹೆಂಡತಿಯನ್ನು ಬೈಯ್ಯುವ ಹಾಡುಗ‌ಳಿರುತ್ತವೆ. ಆದರೆ, ನಮ್ಮ ಸಿನಿಮಾದಲ್ಲಿ ಹೆಂಡತಿಯ ಗುಣಗಾನ ಮಾಡುವ ಹಾಡೊಂದು ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಲೈ ಮಾಸ್ಟರ್‌ ನನ್ನಿಂದ ತುಂಬಾ ಚೆನ್ನಾಗಿ ಡ್ಯಾನ್ಸ್‌ ಮಾಡಿಸಿದ್ದಾರೆ. ಶೀಘ್ರದಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ’ ಎಂದರು.

ಜೊತೆಗೆ ತಾನು ಹೀರೋ ಆಗಲು ಸಹಕರಿಸಿದ ವಿಜಯ್‌ ರಾಮೇ ಗೌಡ ಅವರನ್ನು ನೆನೆದರು. ಚಿತ್ರದ ಹಾಡುಗಳಿಗೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜಿಸಿದ್ದು, ರವಿ ಅವರ ಸಿನಿಮಾ ಪ್ರೀತಿ, ಶ್ರದ್ಧೆಯ ಬಗ್ಗೆ ಹೇಳಿ ಕೊಂಡರು. ಉಳಿದಂತೆ ನಾಯಕಿ ಅಪೂರ್ವ ಹಾಗೂ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು

Advertisement

Udayavani is now on Telegram. Click here to join our channel and stay updated with the latest news.

Next