Advertisement

Gyanvapi survey ಸುಪ್ರೀಂ ಕೋರ್ಟ್‌ ನ ಆದೇಶಕ್ಕೆ ವಿರುದ್ಧವಾಗಿದೆ: ಮುಸ್ಲಿಂ ಅರ್ಜಿದಾರರು

11:25 AM Jul 24, 2023 | Team Udayavani |

ಹೊಸದಿಲ್ಲಿ: ವಾರಣಾಸಿಯಲ್ಲಿನ ಜ್ಞಾನವಾಪಿ ಕಟ್ಟಡದ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಸಮೀಕ್ಷೆಗೆ ತಡೆ ನೀಡುವಂತೆ ಕೋರಿ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಸೋಮವಾರ ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದೆ.

Advertisement

30 ಸದಸ್ಯರ ಎಎಸ್‌ ಐ ತಂಡವು ಇಂದು ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಮಸೀದಿಯನ್ನು ಪ್ರಾಚೀನ ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಇದರ ನಡುವೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ.

ತಮ್ಮ ಅರ್ಜಿಯಲ್ಲಿ, ಮುಸ್ಲಿಂ ಅರ್ಜಿದಾರರು ಎಎಸ್‌ ಐ ಸಮೀಕ್ಷೆಗೆ ಇದೇ ರೀತಿಯ ನಿರ್ದೇಶನಗಳನ್ನು ಈ ಹಿಂದೆ ಸುಪ್ರೀಂ ಕೋರ್ಟ್ ಮುಂದೂಡಿದೆ ಎಂದು ಹೇಳಿದರು.

ಇಡೀ ಆವರಣದ ಉತ್ಖನನ ಸೇರಿದಂತೆ ಸಮೀಕ್ಷೆಯ ಆದೇಶವು ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ಅಡ್ಡಿಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:cardiac arrest: ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ 20 ವರ್ಷದ ಯುವಕ ಹೃದಯ ಸ್ಥಂಭನದಿಂದ ಸಾವು

Advertisement

ಜ್ಞಾನವಾಪಿ ಮಸೀದಿ ಆವರಣದಲ್ಲಿ ಎಎಸ್‌ಐ ಸಮೀಕ್ಷೆ ನಡೆಸುವಂತೆ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮುಸ್ಲಿಂ ಕಡೆಯವರು ಅರ್ಜಿಯ ತುರ್ತು ಪಟ್ಟಿಯನ್ನು ಕೋರುತ್ತಿದ್ದಾರೆ.

ಜ್ಞಾನವಾಪಿ ಮಸೀದಿಯೊಳಗೆ ಐವರು ಹಿಂದೂ ಮಹಿಳೆಯರಿಗೆ ಪೂಜೆ ಸಲ್ಲಿಸುವ ಹಕ್ಕನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಅರ್ಜಿಯು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next