ವಾರಾಣಸಿ: ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗ ರೂಪದ ಕುರಿತಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಬೇಕು ಎಂಬ ಮನವಿಯನ್ನು ವಾರಾಣಸಿ ಜಿಲ್ಲಾ ಕೋರ್ಟ್ ಶುಕ್ರವಾರ (ಅ.14) ತಳ್ಳಿ ತೀರ್ಪು ಹಾಕಿದೆ.
ಮಸೀದಿ ಸಂಕೀರ್ಣದಲ್ಲಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಮತ್ತು ವೈಜ್ಞಾನಿಕ ತನಿಖೆಗೆ ಕೋರಿ ಹಿಂದೂ ಕಡೆಯ ಬೇಡಿಕೆಯನ್ನು ವಾರಾಣಸಿ ನ್ಯಾಯಾಲಯ ತಿರಸ್ಕರಿಸಿ ತೀರ್ಪು ನೀಡಿದೆ.
ಇದನ್ನೂ ಓದಿ : ಜ್ಞಾನವ್ಯಾಪಿ ಮಸೀದಿ: ಕಾರ್ಬನ್ ಡೇಟಿಂಗ್ ಪರೀಕ್ಷೆ ಎಂದರೇನು?
ನ್ಯಾಯಾಲಯದ ಆದೇಶದ ನಂತರ ವಿಡಿಯೋಗ್ರಫಿ ಸಮೀಕ್ಷೆಯ ಬಳಿಕ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಐದು ಹಿಂದೂ ಅರ್ಜಿದಾರರು ಮಸೀದಿಯೊಳಗಿನ ರಚನೆಯ ಕಾರ್ಬನ್ ಡೇಟಿಂಗ್ ಗೆ ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಹಿಂದೆ ಮುಸ್ಲಿಂ ಪರ ವಾದವನ್ನು ಆಲಿಸಿತ್ತು. ಜ್ಞಾನವಾಪಿ ಮಸೀದಿ ಸಮಿತಿಯು ಕಾರ್ಬನ್ ಡೇಟಿಂಗ್ ಮನವಿಯನ್ನು ವಿರೋಧಿಸಿತ್ತು.