Advertisement

ಗ್ವಾಲಿಯರ್‌:ಅ. 31ರಿಂದ ಉದ್ಧವ್‌ ಅಂತಾರಾಷ್ಟ್ರೀಯ “ಡಾನ್ಸ್‌ ಫೆಸ್ಟಿವಲ್‌’

10:23 AM Oct 21, 2019 | sudhir |

ಭೋಪಾಲ್‌: ಗ್ವಾಲಿಯರ್‌ನಲ್ಲಿ 4 ದಿನಗಳ ನಡೆಯಲಿರುವ ಅಂತಾರಾಷ್ಟ್ರೀಯ “ಡಾನ್ಸ್‌ ಫೆಸ್ಟಿವಲ್‌’ ಗೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್‌ 31ರಿಂದ 4 ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ ಸುಮಾರು ದೇಶ ವಿದೇಶಗಳ ಸುಮಾರು 1,000 ಮಂದಿ ಕಲಾವಿದರು ಭಾಗವಹಿಸಲಿದ್ದಾರೆ.

Advertisement

ಉದ್ಧವ್‌ ಸಾಂಸ್ಕೃತಿಕ್‌ ಏವಂ ಕ್ರೀಡಾ ಸಂಸ್ಥಾನಂ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ದೇಶ ವಿದೇಶಗಳ  ಕಲಾವಿದರಿಂದ 4 ದಿನಗಳ ಕಾಲ ಕಲಾ ವೈಭವ ಪ್ರದರ್ಶನಗೊಳ್ಳಲಿದೆ. ಸ್ಪೈನ್‌, ಇಟಲಿ, ಇಸ್ರೇಲ್‌, ಇರಾನ್‌, ರಷ್ಯಾ, ಕಿರ್ಗಿಸ್ಥಾನಗ್‌ ಮತ್ತು ಶ್ರೀಲಂಕಾದಿಂದ ಕಲಾವಿದರ ಬರುವಿಕೆ ಈಗಾಗಲೇ ಅಂತಿಮಗೊಂಡಿದೆ.

ಇದು 16ನೇ ವರ್ಷದ ಅಂತಾರಾಷ್ಟ್ರೀಯ ಡಾನ್ಸ್‌ ಫೆಸ್ಟಿವಲ್‌ ಆಗಿದ್ದು, ವಿದೇಶಗಳ ಸ್ಪರ್ಧಾಳುಗಳ ಜತೆ ದೇಶಿಯ ಕಲಾವಿದರು ಭಾಗವಹಿಸಲಿದ್ದಾರೆ. ಗ್ವಾಲಿಯರ್‌ನ ಶ್ರೀಮಂತ ಮತ್ತು ಮನಮೋಹಕ ಕಲೆಗಳನ್ನು ಜಗತ್ತಿಗೆ ತೋರಿಸುವುದು ಈ ನೃತ್ಯ ಹಬ್ಬದ ಮುಖ್ಯ ಉದ್ಧೇಶವಾಗಿದೆ. ಗ್ವಾಲಿಯರ್‌ ನಗರದಿಂದ ಸಾಂಸ್ಕೃತಿಕ ಮೆರವಣಿಗೆ ಹೊರಟು ಈ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next