Advertisement

ಗರೋಡಿ ಗೈಸ್‌ ಮಿನದನ ಉದ್ಘಾಟನೆ

05:16 PM Mar 06, 2017 | Team Udayavani |

ಕಾಪು: ವಾಟ್ಸಾಪ್‌, ಫೇಸ್ಬುಕ್‌, ಟ್ವಿಟ್ಟರ್‌ ಇತ್ಯಾದಿ ಸಾಮಾಜಿಕ ಜಾಲತಾಣ ಮಾಧ್ಯಮಗಳಿಂದ ಯುವ ಜನರು ಬಾಹ್ಯ ಪ್ರಪಂಚದ ಚಟುವಟಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆಂಬ ಆತಂಕ – ಅಪವಾದಗಳಿವೆ. ಇದಕ್ಕೆ ಅಪವಾದ ವೆಂಬಂತೆ ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತರಲಾದ ಗರೋಡಿ ಗೈಯ್ಸ ವಾಟ್ಸಾಪ್‌ ಗ್ರೂಪ್‌ನ ಸದಸ್ಯರು ಗರೋಡಿ ಗೈಸ್‌ – ಮಿನದನ 2017 ಎಂಬ ಅಪೂರ್ವ ಕಾರ್ಯಕ್ರಮವನ್ನು ಆಯೋಜಿಸಿ, ತುಳುನಾಡ ಗರೋಡಿಗಳ ಬಗ್ಗೆ ವಿಸ್ಕೃತವಾಗಿ ಚರ್ಚಿಸಿ, ವಿಚಾರ-ವಿನಿಮಯ ಮಾಡಿ ಕೊಳ್ಳುವ ಮೂಲಕ ಇತರ ಯುವಕರಿಗೆ ಮಾದರಿಯಾಗಿ ಮೂಡಿ ಬಂದಿದ್ದಾರೆ.

Advertisement

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ಮಾತ್ರವಲ್ಲದೇ ಬೆಂಗಳೂರು, ಮುಂಬಯಿ, ಅರಬ್‌ ರಾಷ್ಟ್ರಗಳಲ್ಲಿ ನೆಲೆಸಿರುವ ಸುಮಾರು 176 ಮಂದಿ ಸದಸ್ಯರನ್ನು ಸೇರಿಸಿಕೊಂಡು ರಚಿಸಲಾಗಿರುವ ಗರೋಡಿ ಗೈಸ್‌ ವಾಟ್ಸಾéಪ್‌ ಗ್ರೂಪ್‌ ಇಂದು ಎಲ್ಲೆಡೆ ಮನೆಮಾತಾಗಿದ್ದು, ಈ ಗುಂಪಿನ ಸದಸ್ಯರೆಲ್ಲರ ಹಲವು ಸಮಯಗಳ ಹಿಂದಿನ ನಿರ್ಧಾರದಂತೆ ಮಾ. 5ರಂದು ಉಡುಪಿ-ಕಿನ್ನಿಮೂಲ್ಕಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಪ್ರಾಂಗಣದಲ್ಲಿ ಜತೆ ಸೇರಿ ಗರೋಡಿ ಗೈಸ್‌ – ಮಿನದನ 2017 ಎಂಬ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅತ್ಯಂತ ಅರ್ಥಪೂರ್ಣವಾಗಿ ನಡೆದ ಗರೋಡಿ ಗೈಸ್‌ – ಮಿನದನ 2017 ಬನ್ನಂಜೆ ಬಾಬು ಅಮೀನ್‌ ಅವರು ಉದ್ಘಾಟಿಸಿ, ವಿಚಾರಗೋಷ್ಠಿಯನ್ನು ನಡೆಸಿಕೊಟ್ಟರು.

ನಿಖೀಲ್‌ ಪೂಜಾರಿ ಹೆಬ್ರಿ, ಕೇಂಜ ಬಗ್ಗ ಪೂಜಾರಿ ಯಾನೆ ಉಮೇಶ್‌ ಕೋಟ್ಯಾನ್‌, ಗುರುರಾಜ್‌ ಪೂಜಾರಿ ಹೆಜಮಾಡಿ, ಕಿನ್ನಿಮೂಲ್ಕಿ ಗರೋಡಿಯ ಅರ್ಚಕ ಭಾಸ್ಕರ ಸುವರ್ಣ , ಅಗತ್ತಾಡಿ ದೋಲ ಬರಿಕೆಯ ಶೈಲೇಶ್‌ ಬಿರ್ವ ಅವರು ವಿಚಾರ ಮಂಡಿಸಿದರು.
ಗರೋಡಿ ಗೈಸ್‌ ವಾಟ್ಸಾಫ್‌ ಗ್ರೂಪ್‌ನ ಅಡ್ಮಿನ್‌ಗಳಾದ ಮಹೇಶ್‌ ಸುವರ್ಣ ಬೋಳೂರು, ದೀಪಕ್‌ ಬೋಳೂರು, ನಿತಿನ್‌ ಬೋಳೂರು ಸಂಚಾಲಕತ್ವದಲ್ಲಿ ಗರೋಡಿ ಗೈಸ್‌ ಮಿನದನ 2017 ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪವನ್‌ 
ಅಮೀನ್‌ ಬೋಳೂರು, ಪಾಂಡು ಕೋಟ್ಯಾನ್‌, ರಜತ್‌ ಜತ್ತನ್‌, ನವೀನ್‌ ತೋನ್ಸೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next