Advertisement

ವಿದೇಶಿಯನೆಂದು ಅರೆಸ್ಟ್‌ ಆಗಿದ್ದ ನಿವೃತ್ತ ಯೋಧನ ಮಧ್ಯಾಂತರ ಬಿಡುಗಡೆಗೆ ಆದೇಶ

10:03 AM Jun 09, 2019 | Team Udayavani |

ಗುವಾಹಟಿ : ಅಸ್ಸಾಮಿನ ರಾಷ್ಟ್ರೀಯ ಪೌರರ ರಿಜಿಸ್ಟ್ರಿಯ ನ್ಯಾಯ ಮಂಡಳಿಯಿಂದ ವಿದೇಶೀಯ ನೆಂದು ಘೋಷಿಸಲ್ಪಟ್ಟು ಪೊಲೀಸರ ವಶವಾಗಿದ್ದ ಸೇನೆಯ ನಿವೃತ್ತ ಸುಬೇದಾರ್‌ ಮತ್ತು ಕಾರ್ಗಿಲ್‌ ಸಮರದ ಹಿರಿಯ ಸೇನಾನಿ ಮೊಹಮ್ಮದ್‌ ಸನಾಉಲ್ಲಾ ಅವರ ಮಧ್ಯಾಂತರ ಬಿಡುಗಡೆಗೆ ಗುವಾಹಟಿ ಹೈಕೋರ್ಟ್‌ ಆದೇಶಿಸಿದೆ.

Advertisement

ಅಸ್ಸಾಮಿನ ಕಾಮರೂಪದಲ್ಲಿನ ವಿದೇಶಿಯರ ನ್ಯಾಯ ಮಂಡಳಿಯು ಸನಾಉಲ್ಲಾ ಅವರನ್ನು ವಿದೇಶೀಯನೆಂದು ಘೋಷಿಸಿದುದನ್ನು ಅನುಸರಿಸಿ ಕಳೆದ ಮೇ 28ರಂದು ಪೊಲೀಸರು ಅವರನ್ನು ಬಂಧಿಸಿ ಡಿಟೆನ್‌ಶನ್‌ ಸೆಂಟರ್‌ಗೆ ಕಳುಹಿಸಿದ್ದರು.

52ರ ಹರಯದ ಸನಾಉಲ್ಲಾ ಅವರು ಗೌರವ ಲೆಫ್ಟಿನೆಂಟ್‌ ಆಗಿ 2017ರಲ್ಲಿ ಸೇನೆಯಿಂದ ನಿವೃತ್ತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next