100 ಅಡಿಗಳಿಗೂ ಅಧಿಕ ಎತ್ತರದ ಬಿದಿರಿನ ದುರ್ಗಾ ಮಾತೆಯ ವಿಗ್ರಹ ಇದೀಗ ಜನಾಕರ್ಷಣೆಯ ಕೇಂದ್ರವಾಗಿದೆ. ಈ
ವಿಗ್ರಹವನ್ನು ಇಟ್ಟಿರುವ ಪೆಂಡಾಲ್‌ಗೆ ಜನರ ಮಹಾಪೂರವೇ ಹರಿದು ಬರುತ್ತಿದ್ದು, ಈ ಬೃಹದಾಕಾರದ ವಿಗ್ರಹಕ್ಕೆ ಗಿನ್ನೆಸ್ ದಾಖಲೆಯ ಗೌರವ ಲಭಿಸಲಿದೆ ಎಂಬುದು ಸಂಘಟಕರ ನಿರೀಕ್ಷೆಯಾಗಿದೆ.
Advertisement
101 ಅಡಿ ಎತ್ತರದ ಈ ಬಿದಿರಿನ ವಿಗ್ರಹವನ್ನು ಅಸ್ಸಾಂನ ಹೆಸರಾಂತ ಕಲಾವಿದರು ಮತ್ತು ಸೆಟ್ ವಿನ್ಯಾಸಕಾರರಾದನೂರುದ್ದೀನ್ ಅಹ್ಮದ್ ಮತ್ತವರ ತಂಡ ನಿರ್ಮಿಸಿದೆ. ಇದರ ನಿರ್ಮಾಣ ಕಾರ್ಯ ಶೇ.70ರಷ್ಟು ಮುಕ್ತಾಯಗೊಂಡಾಗ, ಅಂದರೆ ಸೆ.17ರಂದು ಭಾರೀ ಗಾಳಿಮಳೆಯಾಗಿ ಅದು ಸಂಪೂರ್ಣ ಹಾನಿಗೀಡಾಗಿತ್ತು. ಆದರೆ, ಕಲಾವಿದರು ಧೃತಿಗೆಡದೆ ಮತ್ತೆ ಈ ವಿಗ್ರಹವನ್ನು ವಾರದ ಅವಧಿಯಲ್ಲಿ ರಚಿಸಿದ್ದರು.