Advertisement

ಬಂಟರ ಸಂಘ: ವರ್ಕಾಡಿ ವಲಯ ಸಮಿತಿಯಿಂದ ಗುರುವಂದನೆ

08:30 AM Sep 08, 2017 | Harsha Rao |

ಕುಂಬಳೆ: ಬಂಟರಸಂಘ ವರ್ಕಾಡಿ ವಲಯ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯಂಗವಾಗಿ ಬಾಕ್ರಬೈಲು ಎ.ಯು.ಪಿ. ಶಾಲೆಯ ನಿವೃತ್ತ ಶಿಕ್ಷಕ ಕಿಟ್ಟಣ್ಣ ಶೆಟ್ಟಿಯವರಿಗೆ ಸ್ವಗೃಹದಲ್ಲಿ ವರ್ಕಾಡಿ ಬಂಟ ಸಮಾಜ ಬಾಂಧವರ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.

Advertisement

ಸಮಾರಂಭದಲ್ಲಿ ಮುಡಿಪು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಟಿ. ಆಳ್ವ, ಅತಿಥಿ ಯಾಗಿ ಭಾಗವಹಿಸಿ ಮಾತನಾಡಿ ತಮ್ಮ ಅಧ್ಯಾಪನ ಅನುಭವನ್ನು ವಿವರಿಸಿ ಗುರು ವಂದನೆಯು ಕೇವಲ ಒಂದು ದಿನದ ಮಂತ್ರ ವಾಗಿರದೆ ಅದು ವಿದ್ಯಾರ್ಥಿ ಜೀವನದ ನಿತ್ಯ ಸತ್ಯ ವಿಚಾರ ಆಚಾರವಾಗಿರಲಿ. ಗುರುವಿನ ಭೋದನೆಯು ವಿದ್ಯಾìರ್ಥಿಗಳ ಜೀವನದಲ್ಲಿ ಕೈಪಿಡಿಯಾಗಿರಲಿ ಎಂದರು.  ಗುರುವನ್ನು ಕಂಡಾಗ ಓಡುವುದನ್ನು ಬಿಟ್ಟು ತನ್ನಲ್ಲಿರುವ ತನುವನ್ನು ಓಡಿಸುವ ಕೆಲಸವನ್ನು ಮಾಡಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ವಿಚಾರ ತಾತ್ಪರ್ಯಯವನ್ನು ಅರಿತು ನಡೆಯುವುದೇ ನಿಜವಾದ ಗುರುವಂದನೆ. ವಿದ್ಯಾರ್ಥಿಗೆ ಗುರು ಇದ್ದಾಗ ಆತನ ಜೀವನ ಮೌಲ್ಯಕೊಂದು ಗರಿಮೂಡುವುದು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ದೇವಪ್ಪ ಶೆಟ್ಟಿ ಚಾವಡಿ ಬೈಲು ವಹಿಸಿ ಮಾತನಾಡಿ, ಒಂದು ಮಗುವನ್ನು ಸುಸಂಸ್ಕೃತನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದು ಎಂದರು. ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ದೀಲೀಪ್‌ ರೈ ಸುಳ್ಯಮೆ ತಮ್ಮ ಪಾಸ್ತಾವಿಕ ಭಾಷಣದಲ್ಲಿ ಭಾರತೀಯ ಸಂಸೃRತಿಯಲ್ಲಿ ಗುರುವಿಗೆ ಉನ್ನತ ಸ್ಥಾನ ಕಲ್ಪಿಸಲಾಗಿದೆ ಎಂದರು. ಸಮಿತಿ ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ನಡಿಮಾರು, ಮಹಾಬಲ ಶೆಟ್ಟಿ ಪುಂಡಿಕ್ಕು, ಬಾಲಕೃಷ್ಣ ಶೆಟ್ಟಿ ಪಾವಳ, ಲಕ್ಷ್ಮಣ್‌ ಶೆಟ್ಟಿ ಬೈರೋಡಿ, ಪುಷ್ಪಾವತಿ ಪುಷ್ಪರಾಜ ಶೆಟ್ಟಿ ಬಾಕ್ರಬೈಲು, ಉಷಾ ಬೇಬಿ ಆರ್‌. ಶೆಟ್ಟಿ ಅಡೇಕಳಕಟ್ಟೆ ಉಪಸ್ಥಿತರಿದ್ದರು. ವಿದ್ಯಾನಂದ ಸಾಮಾನಿ ಸ್ವಾಗತಿಸಿದರು.ಜಯಂತ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next