Advertisement
ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಅಧ್ಯಕ್ಷ, ಬಾಕೂìರು ಶ್ರೀ ಸಂಸ್ಥಾನದ ಟ್ರಸ್ಟಿ ಡಾ| ಸತ್ಯಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಈ ಸಮಾರಂಭದ ಯಶಸ್ಸಿಗಾಗಿ ಚರ್ಚಿಸಿ, ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾಗಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಹಾಗೂ ಸಂಪೂರ್ಣ ಕಾರ್ಯಕ್ರಮದ ಮೇಲ್ವಿಚಾರಕರನ್ನಾಗಿ ಡಾ| ಸತ್ಯಪ್ರಕಾಶ್ ಶೆಟ್ಟಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ಮಹಾಪೋಷಕ ಕೆ. ಎಂ. ಶೆಟ್ಟಿ, ವಿಶ್ವಸ್ತ ಬಾಕೂìರು ಸುಧಾಕರ ಶೆಟ್ಟಿ, ಸಭಾ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ಉಪಾಧ್ಯಕ್ಷ ಭಾಸ್ಕರ ಎಂ. ಶೆಟ್ಟಿ, ಸಂಚಾಲಕ ಸಿಎ ಕರುಣಾಕರ ಶೆಟ್ಟಿ ಹಾಗೂವೇಣುಗೋಪಾಲ್ ಶೆಟ್ಟಿ ಅವರನ್ನು ನೇಮಕ ಮಾಡಲಾಯಿತು.
ಅ. 7ರಂದು ಶ್ರೀ ಸಂತೋಷ್ ಗುರೂಜಿ ಅವರ ಉಪಸ್ಥಿತಿಯಲ್ಲಿ ಬೆಳಗ್ಗೆ 9.30ರಿಂದ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯನ್ನು ಆಯೋಜಿ ಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ವಾಗಿ ಪೆರ್ಡೂರು ಮೇಳದ ಕಲಾವಿದರಿಂದ ಬಾಕೂìರು ಕ್ಷೇತ್ರ ಮಹಾತೆ¾ ಯಕ್ಷಗಾನ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಲಿದೆ ಎಂದು ಇದೇ ಸಂದರ್ಭ ತಿಳಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ವಿವಿಧ ಸ್ಥಳೀಯ ಸಮಿತಿ ಗಳ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು ಉಪಸ್ಥಿತ ರಿದ್ದರು.
Related Articles
ಸುವಂತೆ ಡಾ| ಸತ್ಯ ಪ್ರಕಾಶ್ ಶೆಟ್ಟಿ ಅವರು ವಿನಂತಿಸಿದರು. ಈ ಧಾರ್ಮಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಯಶಸ್ವಿ ಗೊಳಿಸಲು ನಾವೆಲ್ಲರೂ ಒಮ್ಮತದಿಂದ ಕಾರ್ಯಪ್ರವೃತ್ತರಾಗೋಣ ಎಂದು ಸಿಎ ಶಂಕರ್ ಬಿ. ಶೆಟ್ಟಿ ಅವರು ನುಡಿದರು. ವೇದಿಕೆಯಲ್ಲಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ಗೌರವಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಸಂಚಾಲಕ ಸಿಎ ಕರುಣಾಕರ ಶೆಟ್ಟಿ, ಮಹಾಪೋಷಕ ಕೆ. ಎಂ. ಶೆಟ್ಟಿ, ವಿಶ್ವಸ್ಥ ಬಾಕೂìರು ಸುಧಾಕರ ಶೆಟ್ಟಿ, ಕೋಶಾಧಿಕಾರಿ ಶಾಂತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Advertisement