Advertisement

ಗುರಿ ಸಾಧನೆಗೆ ಗುರುವಿನ ಸಹಾಯ ಅವಶ್ಯ

10:30 AM Sep 06, 2019 | Suhan S |

ನವಲಗುಂದ: ಯಾರೇ ಒಬ್ಬ ವ್ಯಕ್ತಿ ಉನ್ನತ ಮಟ್ಟದಲ್ಲಿ ಬೆಳೆಯಬೇಕಾದರೆ ಗುರುವಿನ ಸಹಾಯ ಇದ್ದೇ ಇರುತ್ತದೆ. ಗುರು ಒಬ್ಬ ಶಿಲ್ಪಿ ಇದ್ದಂತೆ. ಶಿಷ್ಯನನ್ನು ಸಮಾಜದಲ್ಲಿ ಪರಿಪೂರ್ಣವಾದ ಮೂರ್ತಿಯನ್ನಾಗಿ ರೂಪಿಸುವ ಶಕ್ತಿ ಗುರುವಿನಲ್ಲಿರುತ್ತದೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

Advertisement

ಪಟ್ಟಣದ ಹುರಕಡ್ಲಿ ಅಜ್ಜನ ಕಲ್ಯಾಣ ಕೇಂದ್ರದಲ್ಲಿ ನಡೆದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಲ್ಯದಲ್ಲಿಯೇ ಶಿಕ್ಷಕರು ತಮ್ಮ ಶಿಷ್ಯರಿಗೆ ಒಳ್ಳೆಯ ಬುನಾದಿ ಹಾಕಿಕೊಟ್ಟಿರುತ್ತಾರೆ. ವಿದ್ಯಾರ್ಥಿಗಳು ಗುರುಗಳಿಗೆ ವಂದಿಸಿ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರು: ಪ್ರಶಸ್ತಿಗೆ ಭಾಜನರಾದ ಶಿಕ್ಷಕರಾದ ಎಲ್.ಬಿ. ಶಿರೋಳ, ಎಸ್‌.ವಿ. ಕುಲಕರ್ಣೀ, ಜಿ.ಐ. ಮಕಾನದಾರ, ಜಿ.ಐ. ಹಿರೇಹೊಳಿ, ಎನ್‌.ಎಸ್‌. ಹನಸಿ, ಎ.ಬಿ. ಕಾರಡಿಮಠ, ಡಿ.ವಿ. ಡೋಣೂರಮಠ, ಜೆ.ಬಿ. ಭಜಂತ್ರಿ, ಡಿ.ಬಿ.ಪಡೇಸೂರ, ಜಿ.ಜಿ. ಶಿವಳ್ಳಿ, ಕೆ.ಎಸ್‌. ನಾಗರಕಟ್ಟಿ, ಎಸ್‌.ಎಂ. ಹೊಸಮನಿ, ಬಿ.ಎಂ. ನಲವಡಿ, ಬಿ.ವೈ. ಸತ್ಯಣ್ಣವರ, ಡಿ.ಪಿ. ಗುಡಿಮನಿ, ಶಂಭು ದೊಡಮನಿ ಅವರನ್ನು ಸನ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ವಿತಸಲಾಯಿತು. ಎಪಿಎಂಸಿ ಅಧ್ಯಕ್ಷ ಗುರುನಾಥ ಉಳ್ಳೇಗಡ್ಡಿ, ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಎ.ಬಿ. ಕೊಪ್ಪದ, ಕ್ಷೇತ್ರ ಶಿಕ್ಷಣಾಧಿಕಾರಿ, ಗಿರೀಶ ಪದಕಿ, ದೇವಪ್ಪ ರೋಣದ, ಬಸವರಾಜ ನರಗುಂದ, ವೈ.ಎಚ್. ಬಣವಿ, ಬಿ.ಬಿ. ಹೊನ್ನಕುದರಿ ಇದ್ದರು. ಗಿರೀಶ ಮಳಲಿ ನಿರೂಪಿಸಿದರು. ಬಿ.ಜೆ. ತೊಗರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next