Advertisement

ಸಾಧನೆಗೆ ಗುರುವಿನ ಆಶೀರ್ವಾದ ಮುಖ್ಯ; ನೀಲಕಂಠ ಸ್ವಾಮಿ

06:31 PM Mar 26, 2022 | Team Udayavani |

ಗೋಕಾಕ: ಜಾತ್ರೆಗಳಲ್ಲಿ ಭಾಗವಹಿಸುವುದರಿಂದ ನಾಡಿನ ಅನೇಕ ಮಠಾಧೀಶರ ಆಶೀರ್ವಾದ ಸಿಗುತ್ತದೆ. ಇದರಿಂದ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಮುರಗೋಡದ ಮಹಾಂತ ದುರುದುಂಡೇಶ್ವರ ಮಠದ ನೀಲಕಂಠ ಸ್ವಾಮಿಗಳು ಆಶೀರ್ವದಿಸಿದರು. ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠದ ಕುಂದರನಾಡೋತ್ಸವ-2022ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.

Advertisement

ಮಠಗಳಿಗೆ ಆಸ್ತಿ-ಅಂತಸ್ತು ಮುಖ್ಯವಲ್ಲ, ಭಕ್ತರೇ ಮಠಗಳ ಆಸ್ತಿ. ಜೀವನದಲ್ಲಿ ಏನನ್ನಾದರೂ ಸಾ ಧಿಸಬೇಕೆಂದರೆ ಗುರುವಿನ ಆಶೀರ್ವಾದ ಮುಖ್ಯ. ಅದರಂತೆ ಎಲ್ಲ ಮಠಾಧಿಧೀಶರ ಆಶೀರ್ವಾದ ಸಿಗಬೇಕು ಎಂಬ ಉದ್ದೇಶದಿಂದ ಅಮರಸಿದ್ದೇಶ್ವರ ಶ್ರೀಗಳು ನಾಡಿನ ಅನೇಕ ಪೂಜ್ಯರನ್ನು ಜಾತ್ರೆಗೆ ಆಹ್ವಾನಿಸಿ ಆಶೀರ್ವದಿಸುತ್ತಾರೆ. ದೈನಂದಿನ ಕೆಲಸದ ಒತ್ತಡದ ನಡುವೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿಯ ಬದುಕು ಸಾಧ್ಯ ಎಂದರು.

ಚ.ಕಿತ್ತೂರು ರಾಜಗುರು ಸಂಸ್ಥಾನಮಠದ ಮಡಿವಾಳ ರಾಜೇಂದ್ರ ಸ್ವಾಮಿಗಳು ಮಾತನಾಡಿ, ಶ್ರೀಗಳು ನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಕುಂದರನಾಡಿನ ಪ್ರಶಸ್ತಿ ನೀಡಿ ಸನ್ಮಾನಿಸುವುದರ ಮೂಲಕ ಅವರ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿರು ವುದು ಶ್ಲಾಘನೀಯ. ಈ ಮೂಲಕ ಕುಂದರನಾಡಿನ ಕೀರ್ತಿಯನ್ನು ನಾಡಿಗೆ ತಲುಪಿಸುತ್ತಿದ್ದಾರೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ ಮಾತನಾಡಿದರು. ಸಾಧಕರಾದ ದಿ| ಡಾ.ಸಂತೋಷ ಮುತ್ನಾಳ, ಅಕ್ಕ ಅನು, ವೀರೇಶ ಹಿರೇಮಠ, ಜನನಿ ವತ್ಸಲ ಅವರಿಗೆ ಕುಂದರನಾಡೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಮತೇನಟ್ಟಿಯ ಗುರುದೇವದೇವರು ನಿರೂಪಣೆ ಮಾಡಿದರು.

ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮಿಗಳು, ಹೊಸಹಳ್ಳಿ ಅಭಿನವ ಬೂದಿಶ್ವರ ಸಂಸ್ಥಾನಮಠದ ಬೂದೀಶ್ವರ ಸ್ವಾಮಿಗಳು, ರಾಯಚೂರು ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಮಠದ ಮಹಾಂತ ಸ್ವಾಮಿಗಳು, ಯಳಸೂರು ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಅರಳಿಕಟ್ಟಿಯ ವಿರಕ್ತಮಠದ ಶಿವಮೂರ್ತಿ ದೇವರು,ತಾರೀಹಾಳದ ಅಡವೀಶದೇವರು, ಬಸವರಾಜಸ್ವಾಮಿಗಳು ಕಪ್ಪಾರಹಟ್ಟಿ, ವಿಶ್ವನಾಥದೇವರು, ರೇಣುಕದೇವರು, ಶಿವಶರಣ ದೇವರು, ಚರಮೂರ್ತಿದೇವರು, ಚನ್ನವೀರದೇವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next