Advertisement
ಜಗದ್ಗುರು ಮಧ್ವಾಚಾರ್ಯ ಮೂಲ ಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಪಂಚರಾತ್ರೋತ್ಸವದ ಮೂರನೇ ದಿನದ ಉತ್ತರಾರಾಧನೆಯ ಧಾರ್ಮಿಕ ಕಾರ್ಯಕ್ರಮ ನಡೆದವು. ಪ್ರಾಥಃಕಾಲ 5 ಗಂಟೆಗೆ ಸುಪ್ರಭಾತ, ಮಂಗಳವಾದ್ಯದಿಂದ ಪೂಜಾ ಕೈಂಕರ್ಯ ಆರಂಭಗೊಂಡಿತು ನೈರ್ಮಾಲ್ಯ ವಿಸರ್ಜನೆ, ಶ್ರೀ ಹರಿ ವಾಯುಸ್ತುತಿ, ರಾಘವೇಂದ್ರ ಸ್ತೋತ್ರ ಪಾರಾಯಣ ಸಹಿತ ಫಲ ಪಂಚಾಮೃತ ಅಭಿಷೇಕ, ಪಾದಪೂಜೆ, ಕನಕಾಭಿಷೇಕ, ಮಹಾ ನೈವೇದ್ಯ, ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ ನೆರವೇರಿದವು. ಸಂಜೆ 6:30 ಗಂಟೆಗೆ ಪ್ರಾಕಾರ ರಥೋತ್ಸವ, ಅಷ್ಟಾವಧಾನ ಸೇವೆ ಜರುಗಿತು.
Related Articles
ಮೊಳಕಾಲ್ಮೂರು: ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ಬುಧವಾರ ಪಟ್ಟಣದ ಕೋಟೆ ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತೃತೀಯ ಉತ್ತರಾರಾಧನೆ ನಡೆಯಿತು. ಗುರುರಾಯರ ಬೃಂದಾವನಕ್ಕೆ ಪುಷ್ಪಾಲಂಕಾರ ಮಾಡಿ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಗುರು ರಾಘವೇಂದ್ರ ರಾಯರ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ತಾಲೂಕಿನ ರಾಂಪುರದ ಭೀಮಸೇನಾಚಾರ್ ಉಪನ್ಯಾಸ ನೀಡಿದರು.
Advertisement
ಜ್ಯೋತಿ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ಹಾಗೂ ಎಚ್.ಆರ್. ಹರ್ಷಿತ ಭರತನಾಟ್ಯ ಪ್ರಸ್ತುತಪಡಿಸಿದರು.ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಆರಾಧನಾ ಮಹೋತ್ಸವದಲ್ಲಿ ಬೆಂಗಳೂರಿನ ಡಾ| ಕೆ.ಎಲ್. ನರಹರಿ ರಾವ್, ಜಿ.ಎಸ್.
ಕುಲಕರ್ಣಿ, ಪಟ್ಟಣದ ಎಂ.ಎಸ್. ರಾಘವೇಂದ್ರ ರಾವ್, ಎಂ.ಎಸ್. ಅನಂತಪದ್ಮನಾಭ, ಎಂ.ಎಸ್. ಗುರುರಾಜ್,
ಎಸ್.ಎಸ್. ವೇಣುಗೋಪಾಲ್, ಎಸ್. ಎಸ್. ಶ್ರೀಧರ್, ಎಂ.ಎಸ್. ಗೋಪಿನಾಥ್, ನಾಗಸಮುದ್ರದ ಮಾರುತಿ, ಗುರುಪ್ರಸಾದ್ ಮೊದಲಾದವರು ಪಾಲ್ಗೊಂಡಿದ್ದರು.