Advertisement
ಹಾಡುಗಳ ಮೂಲಕ ಕಥೆಯನ್ನು ವರ್ಣಿಸಿ ಪೂಜಿಸುವಂತಹ ಕಲೆ ಯಕ್ಷಗಾನ..ಆಧಾರಶೃತಿಯೊಂದನ್ನು ಇಟ್ಟುಕೊಂಡು ಭಾಗವತರು ಜಾಗಟೆ ಹಿಡಿದು ಚೆಂಡೆ ಮದ್ದಲೆಗಳವಾದನದ ಗತಿಯನ್ನು ನಿಯಂತ್ರಿಸುತ್ತಾ ಪಾತ್ರಧಾರಿಗಳು ರಂಗದಲ್ಲಿ ಅಭಿನಯಿಸಿ ಕುಣಿಯುವಂತೆ ಮಾಡುತ್ತಾರೆ.ಅಂತೆಯೇ,ಯಕ್ಷಧ್ರುವ ಪಟ್ಲರ ಹಾಡಿನಿಂದ ಪ್ರೇರಣೆಗೊಂಡು ತನ್ನ 12ನೇ ವಯಸ್ಸಿನಲ್ಲಿ ಭಾಗವತಿಕೆಗೆಯತ್ತ ಒಲವು ತೋರಿದ ಶಿಮಂತೂರು ಗುರುರಾಜ್ ಉಪಾಧ್ಯಾಯ ಇದೀಗ ಯಕ್ಷರಂಗದಲ್ಲಿ ಮಿಂಚುತ್ತಿರುವ ಯುವಕಲಾವಿದ.
Related Articles
Advertisement
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆ.ಪಿ.ಎಸ್.ಕೆ. ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು. ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿ ಗಳಿಸಿ ಇದೀಗ ಖಾಸಗಿ ಕಂಪೆನಿಯಲ್ಲಿ ಉದ್ಯೋಗಸ್ತರಾಗಿದ್ದಾರೆ. ಉದ್ಯೋಗದ ಜತೆಗೆ ಹವ್ಯಾಸವನ್ನೂ ಮುಂದುವರಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.
ಬಾಲ್ಯದಲ್ಲಿ ತನ್ನ ತಂದೆ ಯಕ್ಷಗಾನ ಹಾಡುಗಳನ್ನು ಕೇಳುತ್ತಿದ್ದಾಗ ಸಹಜವಾಗಿ ಯಕ್ಷಗಾನದತ್ತ ಆಸಕ್ತಿ ಬೆಳೆಯಿತು.ಯಕ್ಷಗಾನದ ಎಲ್ಲ ಹಾಡುಗಳನ್ನು ಇಷ್ಟಪಡುತ್ತಾರೆ. ಸಂಗೀತ ಹಾಗೂ ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.
ಹವ್ಯಾಸಿ ಕಲಾವಿದರಾದ ಇವರು ಇದುವರೆಗೆ ಅನೇಕ ಗಾನವೈಭವ, ನಾಟ್ಯವೈಭವ, ಯಕ್ಷಗಾನ ಬಯಲಾಟ,ತಾಳಮದ್ದಳೆಗಳನ್ನು ನಡೆಸಿಕೊಟ್ಟಿದ್ದಾರೆ. ಅಭ್ಯಸಿಸದೆ ವೇದಿಕೆ ಏರಬಾರದು
ಮುಂಬರುವ ಕಲಾವಿದರು ಸರಿಯಾಗಿ ಯಕ್ಷಗಾನ ಭಾಗವತಿಕೆಯ ಅಭ್ಯಾಸವನ್ನು ಮಾಡದೇ ವೇದಿಕೆ ಏರಬಾರದು. ಕನಿಷ್ಠ ಬಾಲಪಾಠವನ್ನಾದರೂಕಲಿತಿರಬೇಕು ಎನ್ನುವ ಕಿವಿಮಾತನ್ನು ನೀಡುತ್ತಾರೆ ಗುರುರಾಜ್. ಯಕ್ಷಗಾನವನ್ನು ಪೂಜನೀಯವಾಗಿ ಕಾಣುವ ಇವರುಯಕ್ಷಗಾನವೆಂಬುದು ಕೇವಲ ಕಲಾಪ್ರಕಾರವಲ್ಲದೇ ದೈವಿಕಕಲೆಯೆನಿಸಿಕೊಂಡಿದೆ.ಎಲ್ಲ ಕಲೆಗೂ ದೈವಿಕವಾದ ಅನುಗ್ರಹವಿರುವುದಿಲ್ಲ.ಎಂಬ ಅಭಿಪ್ರಾಯ ಹೊಂದಿದ್ದಾರೆ. ಪಾಲಕರು ಹಾಗೂ ಸ್ನೇಹಿತರ ಸಹಕಾರ ಇಂದು ನನ್ನನ್ನು ಉತ್ತಮ ಕಲಾವಿದನಾಗುವಂತೆ ಮಾಡಿದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಳ್ಳುತ್ತಾರೆ.
ವೈಷ್ಣವಿ ಜೆ. ರಾವ್
ಅಂಬಿಕಾ ವಿದ್ಯಾಲಯ, ಪುತ್ತೂರು