Advertisement

ಗುರುಪ್ರಸಾದ್‌ ಕಾಮಿಡಿ- ಥ್ರಿಲ್ಲರ್‌ ಚಿತ್ರ

09:54 AM Apr 23, 2020 | Suhan S |

ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್‌ ಸ್ಪೆಷಲ್‌, ಎರಡನೇ ಸಲ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಗುರುಪ್ರಸಾದ್‌ ಸದ್ಯ ಕೋವಿಡ್ 19 ಲಾಕ್‌ ಡೌನ್‌ ಮಧ್ಯೆಯೇ ಕಾಮಿಡಿ ಕಥಾಹಂದರದ ಕಥೆಯೊಂದನ್ನು ತೆರೆಗೆ ತರುವ ಪ್ಲಾನ್‌ ನಲ್ಲಿದ್ದಾರೆ ಎಂಬುದು ನಿಮಗೆ ಗೊತ್ತೇ ಇದೆ. ಈಗ ಈ ಚಿತ್ರಕ್ಕೆ ಲಾಕ್‌ ಡೌನ್‌ ಎಂಬ ಟೈಟಲ್‌ ಇಟ್ಟಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

Advertisement

ಈ ಮೂಲಕ ಲಾಕ್‌ ಡೌನ್‌ ಕೂಡಾ ಸಿನಿಮಾ ಟೈಟಲ್‌ ಆದಂತಾಗಿದೆ. ಸಮಾಜದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ವಿಷಯವನ್ನು ತಮ್ಮ ಸಿನಿಮಾ ಟೈಟಲ್‌ ಆಗಿ ಇಡುವುದು ಸಿನಿಮಾ ಮಂದಿಯ ವಾಡಿಕೆ. ಈಗ ಗುರುಪ್ರಸಾದ್‌ ಕೂಡಾ ಅದನ್ನೇ ಮಾಡಿದ್ದಾರೆನ್ನಬಹುದು.

ಸದ್ಯ ಹೊರಗಡೆ ಎಲ್ಲೂ ಹೋಗದಂತ ಪರಿಸ್ಥಿತಿ ಇರುವುದರಿಂದ, ಇಂಥ ಸಂದರ್ಭದಲ್ಲಿ ಸಂಪೂರ್ಣ ಇನ್‌ ಡೋರ್‌ನಲ್ಲಿಯೇ, ಸಾಮಾಜಿಕ ಅಂತರ ಕಾಪಾಡಿಕೊಂಡು ಅತಿ ಕಡಿಮೆ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಂಡು ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದ್ದಾರಂತೆ ಗುರುಪ್ರಸಾದ್‌.

ಈಗಾಗಲೇ ಕಥೆಯೊಂದನ್ನು ಪೂರ್ಣಗೊಳಿಸಿದ್ದು, ಚಿತ್ರದ ಬಗ್ಗೆ ನಿರ್ಮಾಪಕರೊಂದಿಗೆ ಒಪ್ಪಂದ ಬಾಕಿಯಿದೆಯಂತೆ. ಅಂದಹಾಗೆ, ಗುರುಪ್ರಸಾದ್‌ ಈ ಚಿತ್ರವನ್ನು ತಮ್ಮ ಅಧಿಕೃತ ಆಪ್‌ನಲ್ಲಿ ಬಿಡುಗಡೆ ಮಾಡಲಿದ್ದು, ಈ ಇದರ ವಿನ್ಯಾಸ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ಕೊಡುತ್ತಾರೆ. ಒಟ್ಟಾರೆ ಲಾಕ್‌ ಡೌನ್‌ ಮಧ್ಯೆ ಕಾಮಿಡಿ ಚಿತ್ರವೊಂದರ ತಯಾರಿಕೆಯಲ್ಲಿ ನಿರ್ದೇಶಕ ಗುರುಪ್ರಸಾದ್‌ ತೊಡಗಿಸಿಕೊಂಡಿರುವುದು ಸಿನಿಪ್ರಿಯರಲ್ಲಿ ಒಂದಷ್ಟು ಕುತೂಹಲ ಮೂಡಿಸಿದ್ದು, ಚಿತ್ರ ಹೇಗಿರಲಿದೆ ಅನ್ನೊ ಕುತೂಹಲಕ್ಕೆ ಚಿತ್ರ ಬಿಡುಗಡೆಯಾದ ಮೇಲಷ್ಟೇ ಉತ್ತರ ಸಿಗಲಿದೆ.

ಈ ಬಗ್ಗೆ ಮಾತನಾಡುವ ಗುರುಪ್ರಸಾದ್‌, ಒಬ್ಬ ರಂಜಕನಾಗಿ ಯಾವುದೇ ಕಲಾವಿದರ ಅಗತ್ಯವಿಲ್ಲ, ನಾನೇ ಎಲ್ಲರನ್ನು ನಗಿಸುತ್ತೇನೆ. ಪ್ರತಿದಿನ ಫೇಸ್‌ ಬುಕ್‌ ಲೈವ್‌ ಮೂಲಕ ಜನರನ್ನು ತಲುಪುತ್ತಿದ್ದೇನೆ. ಪರಿಸ್ಥಿತಿ ಸುಧಾರಿಸಿದರೆ ನಟ ಜಗ್ಗೇಶ್‌ ಅವರೊಂದಿಗೆ ರಂಗನಾಯಕ ಚಿತ್ರವನ್ನು ಮುಂದುವರೆಸುತ್ತೇನೆ. ಆದರೆ ಅಲ್ಲಿಯವರೆಗೆ ಲಾಕ್‌ ಡೌನ್‌ ಅವಧಿಯಲ್ಲಿ ಒಂದು ಸಿನಿಮಾ ಮಾಡಬಹು ಅನ್ನೊದನ್ನ ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದು ಅಪರೂಪದ ಪ್ರಯೋಗವಾಗಿದೆ ಎಂದು ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next