Advertisement

ನರೇಗಾ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ

05:22 PM Mar 20, 2020 | Naveen |

ಗುರುಮಠಕಲ್‌: ನರೇಗಾ ಯೋಜನೆ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ಒದಗಿಸಲಾಗುತ್ತಿದೆ. ಗ್ರಾಮೀಣ ಜನರು ಅದನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭಯ್ಯ ಹೇಳಿದರು.

Advertisement

ತಾಲೂಕಿನ ಅನಪುರ ಗ್ರಾಪಂ ವ್ಯಾಪ್ತಿಯ ನಸಲ್ವಾಯಿ ಗ್ರಾಮದ ದೊಡ್ಡ ಕೆರೆ ಹೊಳೆತ್ತುವ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿವ ಕೂಲಿ ಕಾರ್ಮಿಕರಿಗೆ ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಗ್ರಾಮಮಟ್ಟದಲ್ಲಿ ಸಮುದಾಯದ ಕಾಮಗಾರಿಗಳಾದ ಕೆರೆ, ಗೋಕಟ್ಟೆಗಳಲ್ಲಿ ಹೂಳೆತ್ತುವುದು, ಕೊಳವೆಬಾವಿ, ಮರುಪೂರ್ಣ ಘಟಕ, ಆಟದ ಮೈದಾನ, ರೈತರ ಕಣ, ಚೆಕ್‌ಡ್ಯಾಂ, ರೈತರ ಹೊಲಗಳಿಗೆ ಹೋಗಲು ದಾರಿ, ಕೃಷಿ ಹೊಂಡ, ಅಂಗನವಾಡಿ ಕೇಂದ್ರ, ಗ್ರಾಮೀಣ ಗೋದಾಮು, ಸ್ಮಶಾನ ಅಭಿವೃದ್ಧಿ, ಉದ್ಯಾನವನ ನಿರ್ಮಾಣ, ಕೃಷಿ ಇಲಾಖೆ ಕಾಮಗಾರಿಗಳು, ತೋಟಾಗಾರಿಕೆ ಬೆಳೆಗಳು, ರೇಷ್ಮೆ ಬೆಳೆಗಳು ಹಾಗೂ ಅರಣ್ಯ ಇಲಾಖೆ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next