Advertisement

ಮುಂಗಡ ಪತ್ರ ರಚನೆಗೆ ನಾಗರಿಕರ ಸಲಹೆ

06:23 PM Dec 25, 2019 | Naveen |

ಗುರುಮಠಕಲ್‌: ಪಟ್ಟಣದ ಪುರಸಭೆಯುಲ್ಲಿ ಆಯೋಜಿಸಿದ್ದ 2020-21ನೇ ಸಾಲಿನ ಎರಡನೇ ಸುತ್ತಿನ ಮುಂಗಡ ಪತ್ರ ತಯಾರಿಸುವ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ, ಮೂಲ ಸೌಲಭ್ಯಗಳ ಪೂರೈಕೆ, ಸೌಂದರ್ಯೀಕರಣಕ್ಕೆ ಸಂಬಂಧಿಸಿದಂತೆ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಲಹೆ ಸೂಚನೆ ನೀಡಿದದರು.

Advertisement

ಪಟ್ಟಣ ತಾಲೂಕು ಕೇಂದ್ರವಾದ ನಂತರ ವೇಗವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ಬೆಳವಣಿಗೆಗೆ ಪೂರಕವಾಗಿ ಕೈಗೊಳ್ಳಬಹುದಾದ ಕ್ರಮಗಳು, ಮಾಡಬೇಕಾದ ವ್ಯವಸ್ಥೆ ಹಾಗೂ ಕೆಲಸಗಳ ಕುರಿತು ಸಲಹೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಜೀವನಕುಮಾರ ಕಟ್ಟಿಮನಿ ಮನವಿ ಮಾಡಿದರು.

ಪಟ್ಟಣದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿರ್ವಹಣೆಗೆ ಪಾರ್ಕಿಂಗ್‌ ಸ್ಥಳ ವ್ಯವಸ್ಥೆ ಮಾಡಬೇಕು. ವೇಗದ ಚಾಲನೆಗೆ ನಿಯಂತ್ರಣ ಹೇರಬೇಕು. ಕಾಕಲವಾರ ಕ್ರಾಸ್‌, ಬಸ್‌ ನಿಲ್ದಾಣದ ಹತ್ತಿರ, ಶರಣು ಹೋಟೆಲ್‌ ಮುಂದುಗಡೆ, ಸಿಹಿನೀರು ಬಾವಿ ಹತ್ತಿರ, ಬಸವ ವೃತ್ತ, ನಾಡಕಚೇರಿ ಬಳಿ ಶೌಚಾಲಯ ನಿರ್ಮಿಸಿಬೇಕು. ಸರ್ವೇ ನಂ 90ರಲ್ಲಿ ಗಾರ್ಡನ್‌ನಲ್ಲಿ ತಂತಿಬೇಲಿ ಹಾಕಬೇಕು, ವಾರ್ಡ್‌ ನಂ. 10ರಲ್ಲಿ ಇಂದ್ರನಗರದಲ್ಲಿ ಅಲೆಮರಿ ಜನರಿಗೆ 60 ಮನೆಗಳು ನಿರ್ಮಾಣ ಮಾಡಬೇಕು. ಪುರಸಭೆ ಸ್ಥಳ ಇದ್ದರೆ ಅಂಗನವಾಡಿ ಕೇಂದ್ರ ನಿರ್ಮಿಸಿಬೇಕು. ವಾರ್ಡ್‌ 14ನಲ್ಲಿ ಸಮುದಾಯ ಭವನ ನಿರ್ಮಿಸಿಬೇಕು. ಬುದೂರ ಗೇಟ್‌ಯಿಂದ ನಾರಾಯಣಪೇಟ ರೋಡ್‌ ವರೆಗೆ ಬ್ರಿಜ್‌ ಮತ್ತು ಬೈಪಾಸ್‌ ರೋಡ್‌ ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಲಾಯಿತು.

ತಪ್ಪಿಸಿ ಚರಂಡಿ ವ್ಯವಸ್ಥೆ ಉತ್ತಮಗೊಳಿಸಲು ಸಿಮೆಟ್‌ ಮೇಲುಹಾಸು ಹೊದಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್‌ ನಿಲ್ದಾಣದ ಹತ್ತಿರದಲ್ಲಿ ಪುರಸಭೆ ಕರ ಪಾವತಿ ಕೇಂದ್ರ ಆರಂಭಿಸಬೇಕು. ಚಿಕ್ಕಮಠದಿಂದ ಪೋಚಮ್ಮ ಗುಡಿವರೆಗೆ ಚರಂಡಿ ನಿರ್ಮಾಣ, ವಿವಿಧ ವಾರ್ಡ್‌ಗಳಲ್ಲಿ ಶೌಚಾಲಯ, ಸಮುದಾಯ ಭವನ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿ ಹಾಗೂ ಜನರ ನೀರಿನ ಬೇಡಿಕೆ ಪೂರೈಸಲು ತೆರೆದ ಬಾವಿಗಳಿಗೆ ವಿದ್ಯುತ್‌ ಮೋಟಾರು ಅಳವಡಿಸಿ ಪಕ್ಕದಲ್ಲಿಯೆ ನೀರಿನ ತೊಟ್ಟಿ ನಿರ್ಮಿಸುವಂತೆ ಸಾರ್ವಜನಿಕರು ಸಲಹೆ ನೀಡಿದರು.

ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಸುಂಗಲಕರ್‌, ಲೆಕ್ಕಾಧಿಕಾರಿ ಅನೀಲ ಯರಗಾಳ, ಪರಿಸರ ಅಭಿಯಂತರ ಪ್ರಶಾಂತ ಸೂರ್ಯವಂಶಿ, ಹಿರಿಯ ನೈರ್ಮಲ್ಯ ಅಧಿಕಾರಿ ರಾಮುಲುಗೌಡ, ಅಶನ್‌ಬುದ್ದ, ಅಶೋಕ ಕಲಾಲ, ನರಸಪ್ಪ ಗಡ್ಡಲ್‌, ಕ್ರೀಷ್ಣ ಮೇದಾ, ಪಾಪಿರೆಡ್ಡಿ, ಬಸವರಾಜ, ಅಶೋಕ, ಚಂದುಲಾಲ್‌ ಚೌದ್ರಿ, ವೀರಪ್ಪ ಪಡಿಗೆ, ಸಿರಾಜ್‌ ಚಿಂತಕುಂಟಿ, ಅನ್ವರ್‌ ಅಮ್ಮದ್‌, ಫಯಜ್‌ ಅಮ್ಮದ್‌, ವಿನಯ್ಯೇಕರ್‌ ಹಿರೇಮಠ, ರವಿರೆಡ್ಡಿ, ಬಸವರಾಜ ಅವುಂಟಿ, ನರೇಂದ್ರ ಸಾಕಾ, ವಿಷ್ಣುವರ್ಧನ ರೆಡ್ಡಿ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿ ಹಾಗೂ ಪಟ್ಟಣದ ಪ್ರಮುಖರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next