Advertisement
ಭಾರತೀಯರು ಪ್ರಕೃತಿ ಪ್ರಿಯರು. ಅದಕ್ಕಾಗಿಯೇ ಪ್ರಕೃತಿ ದೇವಿಯಆರಾಧನೆಯಲ್ಲಿ ಬಹುತೇಕ ಹಬ್ಬಗಳನ್ನು ಪ್ರಕೃತಿ ಮಡಿಲಲ್ಲಿಯೇ ಆರಾಧಿಸುತ್ತಾರೆ. ಪ್ರಕೃತಿ ಸೌಂದರ್ಯ ತುಂಬಿಕೊಂಡು, ಚಿಗುರೊಡೆದು ಸಂತಸವನ್ನಾಚರಿಸುವ ವಸಂತದಲ್ಲೇ ಯುಗಾದಿ
ಹಬ್ಬ ಆಚರಿಸಲಾಗುತ್ತದೆ. ಅಲ್ಲದೇ ಚಾಂದ್ರಮಾನ ಹಾಗೂ ಸೌರಮಾನ ಪಂಚಾಂಗಗಳಿಗೆ ಅನುಗುಣವಾಗಿ ಎರಡು ಯುಗಾದಿಗಳನ್ನೂ ಆಚರಿಸಲಾಗುತ್ತದೆ.
Related Articles
Advertisement
ಬೇವು-ಬೆಲ್ಲದ ಬಾಂಧವ್ಯ: ಕನ್ನಡಿಗರು ಬೇವು-ಬೆಲ್ಲವನ್ನು ನೈವೇದ್ಯ ಮಾಡುತ್ತಾರೆ. ಶತಾಯುರ್ವಜ್ರದೇಹಾಯ ಸರ್ವ ಸಂಪತ್ಯರಾಯ ಚ, ಸರ್ವಾರಿಷ್ಟ ನಿನಾಶಾಯ ನಿಂಬಕಂದಲ ಭಕ್ಷಣಂ ಎಂಬ ಶ್ಲೋಕ ಪಠಿಸುತ್ತ ಪರಸ್ಪರ ಹಂಚಿಕೊಳ್ಳುತ್ತಾರೆ. ಕಹಿ ಬೇವೂ; ಸಿಹಿ ಬೆಲ್ಲವೂ ಎರಡು ಜೀವಕ್ಕೆ ಒಳಿತು ತರುವಂತೆ ಸಿಹಿ ಸುಖವೂ; ಕಹಿ ದುಃಖವೂ ನಮಗೆ ಉನ್ನತಿಯನ್ನೇ ತರಲಿ ಎಂಬ ಹಾರೈಕೆ ಇಲ್ಲಿದೆ.
ಮೃಷ್ಟಾನ್ನ ಭೋಜನ: ಹಬ್ಬದೂಟದಲ್ಲಿ ಒಬ್ಬಟ್ಟು, ಪಾಯಸ, ಅಂಬೊಡೆ ಇರಲೇಬೇಕು. ಬಂಧುಮಿತ್ರರನ್ನೂ ಆಹ್ವಾನಿಸಿ ಸಹಭೋಜನ ಮಡುವುದು ಯುಗಾದಿ ವಿಶೇಷ. ಪ್ರಕೃತಿರೂಪದಲ್ಲಿ ಕಂಗೊಳಿಸುವ ಲಕ್ಷ್ಮೀ ಪೂಜಿಸುವುದು ವಾಡಿಕೆ. ಮಾವಿನ ಚಿಗುರು-ಮಂಜಿರಗಳನ್ನೇ ಬಳಿಸಿ ಬಗೆ ಬಗೆಯ ಅಡುಗೆ, ಪೂಜೆ, ಅಲಂಕಾರ ಮಾಡುತ್ತಾರೆ. ಯುಗಾದಿಯಂದೇ ನವಯುಗ: ಮತ್ಸ್ಯಾವತಾರ ತಾಳಿದ ಮಹಾವಿಷ್ಣು ಯುಗಾದಿಯಂದೇ ನವಯುಗ ಪ್ರಾರಂಭಿಸಿದನೆಂದು ಕಥೆಯಿದೆ. ಅಂತೆಯೂ ಬ್ರಹ್ಮ ದೇವನು ಯುಗಾದಿಯಂದೇ ತನ್ನ ಸೃಷ್ಟಿಗೆ ಮೊದಲಾದನೆಂಬ ಕಥೆಯೂ ಇದೆ. ಸೂರ್ಯದೇವನು ಅಂದೇ ತನ್ನ ಪ್ರಥಮ ಕಿರಣ ಹೊಮ್ಮಿಸಿ ಭೂಮಿಯಲ್ಲಿನ
ಬದುಕಿಗೆ ಚಾಲನೆ ಕೊಟ್ಟನೆಂಬ ಮಾತು ಇದೆ. ಶಾಲಿವಾಹನ ಮಹಾರಾಜನು ಶಾಲಿವಾಹನ ಶಕಿ ಯುಗಾದಿಯಂದೇ ಪ್ರಾರಂಭಿಸಿದನೆಂಬುದು ವಾಡಿಕೆ. ಅಂತೆಯೇ ಇಂದಿಗೂ ಹಲವು
ಗ್ರಾಮ-ಮಠ-ಮಂದಿರಗಳಲ್ಲಿ ಯುಗಾದಿಯಿಂದ ರಥೋತ್ಸವ, ಪಲ್ಲಕ್ಕಿ ಉತ್ಸವ, ಜಾತ್ರೆ, ಸಂಗೀತೋತ್ಸವಗಳು ಜರುಗುತ್ತವೆ. ಹೀಗೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..ಹೊಸ ವರ್ಷಕ್ಕೆ ಹೊಸ ಹರುಷಕ್ಕೆ ಹೊಸತು ಹೊಸತು ತರುತಿದೆ… ಎನ್ನುವ ಹಾಡು ಜನಮಾನಸವಾಗಿದೆ. ಹಬ್ಬದೂಟದಲ್ಲಿ ಹಲವು ಖ್ಯಾದಪೇಯಗಳ ಜೊತೆಗೆ ಒಬ್ಬಟ್ಟು,
ಪಾಯಸ, ಅಂಬೊಡೆ ಇರಲೇಬೇಕು. ಬಂಧುಗಳನ್ನು ಆಹ್ವಾನಿಸಿ ಅವರೊಡನೆ ಸಹಭೋಜನ ಮಾಡುವುದು ಹಬ್ಬದ ವಿಶೇಷ. ಯುಗಾದಿ ಜೀವನಕ್ಕೆ ಹೊಸ ತಿರುವುದು, ಹೊಸ ಚೈತನ್ಯ ನೀಡಲಿ.
.ಮಲ್ಲೇಶಪ್ಪ ಬೇಲಿ, ಹಿರಿಯರು ಯುಗಾದಿಯಂದು ಹಲವು ಮಠ-ಮಂದಿರಗಳಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಜಾತ್ರೆ-ಸಂಗೀತೋತ್ಸವಗಳು ಜರುಗುತ್ತವೆ. ಸಂತ ಸಮಯದಲ್ಲಿ ವಸಂತ ಮಾಸದಲ್ಲಿ ಬರುವ ಯುಗಾದಿ ಬಯಲಲ್ಲೂ, ಒಳಗೂ ಹಬ್ಬವನ್ನಾಚರಿಸಲು ಸೂಕ್ತ ಸಮಯ. ಆದ್ದರಿಂದಲೇ ಅಹೋರಾತ್ರಿ ಉತ್ಸವ, ಮೇಳಗಳು ನಡೆಯುತ್ತವೆ.
.ಬಸವರಾಜ ಬೂದಿ,
ನಿವೃತ್ತ ಶಿಕ್ಷಕ ಚನ್ನಕೇಶವುಲು ಗೌಡ