Advertisement

ಮಾಸ್ಕ್ ಧರಿಸದೆ ಓಡಾಡಿದ್ರೆ ದಂಡ ವಿಧಿಸಲು ಸೂಚನೆ

03:51 PM Jun 17, 2020 | Naveen |

ಗುರುಮಠಕಲ್‌: ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ಇನ್ನು ಮುಂದೆ ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಜೀವನಕುಮಾರ ಎಚ್ಚರಿಸಿದ್ದಾರೆ.

Advertisement

ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆದ ಕಿರಾಣಿ ಅಂಗಡಿಗಳ ಮಾಲೀಕರು ಹಾಗೂ ಬೀದಿ ವ್ಯಾಪರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ರೋಗ ನಮ್ಮ ಕ್ಷೇತ್ರದಲ್ಲಿ ಹೆಚ್ಚು ಪ್ರಸರಣವಾಗುತ್ತಿದೆ. ಜನರು ಅಂಗಡಿಗಳಿಗೆ ವ್ಯಾಪಾರ ಮಾಡಲು ಬಂದಾಗ ಮಾಸ್ಕ್ ಧರಿಸಿಕೊಳ್ಳುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು. ಅಂಗಡಿ ಮುಂಭಾಗಗಳಲ್ಲಿ ಯಾರಾದರೂ ತಂಬಾಕು, ಗುಟ್ಕಾ ಉಗುಳಿದರೆ, ಸಿಗರೇಟ್‌ ಸೇದುತ್ತಿರುವುದು ಕಂಡು ಬಂದಲ್ಲಿ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.

ಅಂಗಡಿಯಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್‌ ಇಟ್ಟಿರಬೇಕು. ಒಟ್ಟಾರೆ ಸ್ವಚ್ಛತೆ ಕಾಪಾಡಬೇಕು. ನಾವೆಲ್ಲರು ಕೂಡಿ ಕೋವಿಡ್ ತಡೆಯಬೇಕಾಗಿದೆ. ರಸ್ತೆಯಲ್ಲಿ ಜನರು ಮಾಸ್ಕ್ ಇಲ್ಲದೆ ಓಡಾಡಿದರೆ ಇನ್ನು ಮುಂದೆ 1000 ರೂ. ದಂಡ ಹಾಕಲಾಗುವುದು ಎಂದು ಹೇಳಿದರು. ತಹಶೀಲ್ದಾರ್‌ ಸಂಗಮೇಶ ಜಿಡಗಿ, ಪುರಸಭೆ ಸದಸ್ಯರು, ಕಿರಾಣಿ ಅಂಗಡಿ ಹಾಗೂ ಬೀದಿ ವ್ಯಾಪಾರಸ್ಥರು, ಪುರಸಭೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next