Advertisement

ಮಲ್ಲಮ್ಮ ಜೀವನ ಎಲ್ಲರಿಗೂ ಮಾದರಿ

05:14 PM May 31, 2019 | Naveen |

ಗುರುಮಠಕಲ್: ಆಧುನಿಕ ಜೀವನ ಕ್ರಮದಲ್ಲಿ ನಾವೆಲ್ಲಾ ನನ್ನ ಕುಟುಂಬ, ಮನೆ, ಜಾತಿ ಎಂಬ ಸ್ವಾರ್ಥದ ವ್ಯವಸ್ಥೆಯಲ್ಲಿ ಮುಳುಗುತ್ತಿದ್ದು, ನಾವೀಗ ಅಂತಹ ಸಂಕುಚಿತ ವ್ಯವಸ್ಥೆಯಿಂದ ಸಮಷ್ಟಿ ಪ್ರಜ್ಞೆಯೆಡೆಗೆ ಬರಬೇಕಿದೆ ಎಂದು ಉಪನ್ಯಾಸಕ ಮಲ್ಲಿಕಾರ್ಜುನ ಪಾಟೀಲ ಚಪೆಟ್ಲಾ ಕರೆ ನೀಡಿದರು.

Advertisement

ಸಮೀಪದ ಚಪೆಟ್ಲಾ ಗ್ರಾಮದಲ್ಲಿ ರೆಡ್ಡಿ ಸಮಾಜ, ಹೇಮರಡ್ಡಿ ಮಲ್ಲಮ್ಮ ಯುವಕ ಬಳಗ ಹಾಗೂ ಮಾತೆ ಹೇಮಾರಡ್ಡಿ ಮಲ್ಲಮ್ಮ ಮಹಿಳಾ ಒಕ್ಕೂಟಗಳು ಜಂಟಿಯಾಗಿ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾತೆ ಹೇಮರಡ್ಡಿ ಮಲ್ಲಮ್ಮ ಉಪನ್ಯಾಸಗಳನ್ನು ಅಥವಾ ಉಪದೇಶಗಳನ್ನು ನೀಡಿದವರಲ್ಲ ಮತ್ತು ಯಾವುದೇ ಕೃತಿಗಳನ್ನು ರಚಿಸಿದವರಲ್ಲ. ಆದರೆ ಅವರ ಜೀವನವೇ ಹಲವು ಮೌಲ್ಯಗಳನ್ನು ಕಲಿಸುವ ಮಹಾಕಾವ್ಯವಾಗಿಸಿ, ಮನು ಕುಲವನ್ನು ಬೆಳಗಿದ ಜ್ಯೋತಿಯಾಗಿದ್ದಾರೆ ಎಂದು ಹೇಳಿದರು.

ಇಂದು ಜಾತಿ, ಮತ, ಪಂಥಗಳೆಂಬ ಸಂಕುಚಿತತೆಯಲ್ಲಿ ನಾವೆಲ್ಲಾ ಬಂಗಳಾಗುತ್ತಿರುವುದು ಕಳವಳಕಾರಿಯಾಗಿದ್ದು, ವಿಶ್ವ ಮಾನವತೆಯ ಸಂದೇಶವನ್ನು ಸಾರಿತ ಸಾಧು, ಸಂತ, ಮಹರ್ಷಿ, ದಾರ್ಶನಿಕರ ನೆಲದಲ್ಲಿ ಜನಿಸಿದ ನಾವು ಹೀಗೆ ಸ್ವಾರ್ಥದಲ್ಲಿ ಮುಳುಗಿರುವುದು ನಾಚಿಕೆಯ ವಿಷಯವಾಗಿದ್ದು, ನಮ್ಮದು ವಸುದೈವ ಕುಟುಂಬಂ ತತ್ವದ ಜೀವನವಾಗಬೇಕು ಎಂದು ಸಲಹೆ ನೀಡಿದರು.

ನವಾಜರೆಡ್ಡಿ, ಭೀಮರೆಡ್ಡಿ ಗವಿನೋಳ, ನಿವೃತ್ತ ಶಿಕ್ಷಕ ವೆಂಕಟರೆಡ್ಡಿ, ಪರಮಾರೆಡ್ಡಿ, ಬಲರಾಮರೆಡ್ಡಿ, ಶಿವರೆಡ್ಡಿ, ಬಿಚ್ಚಿರೆಡ್ಡಿ, ಮಹೇಶ ಆವಂಟಿ, ನಾರಾಯಣ ಬಡಿಗೇರ, ವೆಂಕಟರೆಡ್ಡಿ, ಆನಂದರೆಡ್ಡಿ, ಹಣಮಿರೆಡ್ಡಿ, ಬ್ರಹ್ಮಾನಂದರೆಡ್ಡಿ, ಸೋಮರೆಡ್ಡಿ, ಭೀಮರೆಡ್ಡಿ, ನಾರಾಯಣರೆಡ್ಡಿ, ಅನಂತರೆಡ್ಡಿ, ಶ್ರೀನಿವಾಸರೆಡ್ಡಿ, ರಾಮರೆಡ್ಡಿ, ಮಾಧವರೆಡ್ಡಿ ಸೇರಿದಂತೆ ಯುವಕ ಬಳಗದ ಕಾರ್ಯಕರ್ತರು ಹಾಗೂ ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next