Advertisement

ಸೌಲಭ್ಯಕೊರತೆ:ವಿದ್ಯಾರ್ಥಿಗಳಪರದಾಟ

01:22 PM Nov 28, 2019 | Naveen |

„ಚೆನ್ನಕೇಶವುಲು ಗೌಡ
ಗುರುಮಠಕಲ್‌:
ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪಟ್ಟಣದ ನಾರಾಯಣಪುರ ಬೇಸ್‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1983ರಲ್ಲಿ ಎರಡು ಕೊಠಡಿಗಳು ನಿರ್ಮಾಣವಾಗಿವೆ. ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು ಹೊರಾಂಗಣದಲ್ಲಿ ಕುಳಿತು ಅಭ್ಯಾಸ ಮಾಡುತ್ತಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ಇದ್ದಾರೆ. 1ರಿಂದ 5ನೇ ತರಗತಿಗೆ ಒಟ್ಟು 48 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

Advertisement

ನಿತ್ಯ ನಾಲ್ಕೈದು ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿದ್ದರೆ ಶೇ.90ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಾರೆ. ಶಾಲೆಯಲ್ಲಿ ಎರಡು ಕೊಠಡಿಗಳಿವೆ. ಒಂದು ಕೊಠಡಿಯಲ್ಲಿ ಮುಖ್ಯ ಶಿಕ್ಷಕರ ಟೇಬಲ್‌, ಖುರ್ಚಿ, ಪಠ್ಯ ಪುಸ್ತಕ, ಶಾಲಾ ದಾಖಲಾತಿ ಇಡಲಾಗಿದೆ. ಇನ್ನೂಂದು ಕೊಠಡಿಯಲ್ಲಿ ಶಿಕ್ಷಕಿ ಮಕ್ಕಳಿಗೆ ಪಾಠ ಮಾಡುತ್ತಾರೆ.

ಇದರಲ್ಲಿ ಶಿಕ್ಷಕಿಯರಿಗೆ ಸಭೆ, ತರಬೇತಿ, ಬ್ಯಾಂಕ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಜವಾಬ್ದಾರಿ ಇರುತ್ತದೆ. ಅಷ್ಟು ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು ಪಾಠ ಮಾಡಬೇಕಾಗಿದೆ. ಶಾಲೆ ಸುತ್ತಮುತ್ತ ಅನೈರ್ಮಲ್ಯ ವಾತಾವರಣ ಇದೆ. ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಕಟ್ಟಡದ ಛಾವಣಿಗೆ ಬಳಸಲಾದ ಸಿಮೆಂಟ್‌ ಪದರು ಆಗಾಗ ಉದುರುತ್ತದೆ. ಈ ನಡುವೆ ಅಪಾಯ ಭೀತಿಯಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಾರೆ. ಕಳೆದ 8 ವರ್ಷದಿಂದ ಶಾಲೆ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿದಿಲ್ಲ.

ನಿರ್ವಹಣೆ ಕೊರತೆಯಿಂದ ಶೌಚಾಲಯ ನಿರುಪಯುಕ್ತವಾಗಿದೆ. ಆಟದ ಮೈದಾನ ಇಲ್ಲ. ಹತ್ತು ಹಲವು ಕೊರತೆಗಳ ಮಧ್ಯೆ ಮಕ್ಕಳು ಹೇಗೆ ಗುಣಮಟ್ಟದ ಶಿಕ್ಷಣ ಕಲಿಯಬೇಕು? ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಅನಿವಾರ್ಯ ಎಂಬಂತೆ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.

ಶಿಕ್ಷಣ ಇಲಾಖೆ ತಕ್ಷಣ ಶಾಲೆಗೆ ಕೊಠಡಿ ಮಂಜೂರು ಮಾಡಬೇಕು. ಕೂಡಲೇ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next